ADVERTISEMENT

ಜಿತೊ: ನವೋದ್ಯಮ ನೆರವಿಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:30 IST
Last Updated 27 ಮೇ 2018, 19:30 IST
ಜಿತೊ: ನವೋದ್ಯಮ ನೆರವಿಗೆ ವೇದಿಕೆ
ಜಿತೊ: ನವೋದ್ಯಮ ನೆರವಿಗೆ ವೇದಿಕೆ   

ಬೆಂಗಳೂರು: ನವೋದ್ಯಮಗಳಿಗೆ ನೆರವಾಗುವ ದೃಷ್ಟಿಯಿಂದ ನಗರದಲ್ಲಿ ನಡೆದ ಜೈನ್ ಅಂತರರಾಷ್ಟ್ರೀಯ ವ್ಯಾಪಾರ ಒಕ್ಕೂಟದ (ಜಿತೊ) ಸಮಾವೇಶದಲ್ಲಿ ಹೂಡಿಕೆದಾರರು ಮತ್ತು ನವೋದ್ಯಮಿಗಳ ನಡುವೆ ಸಂಪರ್ಕ ಬೆಸೆಯುವ ಕಾರ್ಯಕ್ರಮ ನಡೆಯಿತು.

ಉದ್ಯಮಿಗಳು, ವೃತ್ತಿಪರರು ಮತ್ತು ಕೈಗಾರಿಕೋದ್ಯಮಿಗಳನ್ನು  ಒಳಗೊಂಡ ‘ಜೀತೊ’ ಸಂಘಟನೆಯ ಏಂಜೆಲ್ ನೆಟ್‍ವರ್ಕ್ (ಜನ್) ಸದಸ್ಯರ ಎದುರು ನವೋದ್ಯಮಿಗಳು ತಮ್ಮ ಪರಿಕಲ್ಪನೆಗಳನ್ನು ಬಿಚ್ಚಿಟ್ಟರು.

ಜೀತೊ ಒಕ್ಕೂಟದ ‘ಇನ್ವೆಸ್ಟರ್ ಪಿಚ್ ಡೇ’ ಹೆಸರಿನ ಈ ಕಾರ್ಯಕ್ರಮವು ನವೋದ್ಯಮಿಗಳಿಗೆ ಬಂಡವಾಳ ಹೂಡಿಕೆಗೆ ಮನವಿ ಸಲ್ಲಿಸಲು ವಿಶಿಷ್ಟ ವೇದಿಕೆ ಒದಗಿಸಿತು.

ADVERTISEMENT

ವಿವಿಧ ಸಾಧನಗಳ ನಡುವೆ ಇಂಟರ್‌ನೆಟ್‌ ಆಧಾರಿತ ಸುರಕ್ಷಿತ ಸಂಪರ್ಕ ಬೆಸೆಯುವ ಹೆಟ್ರೋಜೀನಸ್ ತಂತ್ರಜ್ಞಾನ ಹೂಡಿಕೆದಾರರ ಕುತೂಹಲ ಕೆರಳಿಸಲು ಯಶಸ್ವಿಯಾಯಿತು.

‘ನಮ್ಮ ಯುವಕರು ನಾಳಿನ ನಾಯಕರು. ದೇಶದ ಭವಿಷ್ಯ ರೂಪಿಸುವ ದೂರದೃಷ್ಟಿ ಅವರಲ್ಲಿದೆ. ಯುವ ನವೋದ್ಯಮಿಗಳ ಆಲೋಚನೆಗಳಿಗೆ ನೀರೆರೆ
ಯಬೇಕು. ಇದು ಉದ್ಯಮ ವಾತಾವರಣದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದು ಜೀತೊ ಒಕ್ಕೂಟದ ಇನ್‍ಕ್ಯುಬೇಷನ್ ಆ್ಯಂಡ್ ಇನೋವೇಷನ್‌ ಫೌಂಡೇಷನ್‍ ಅಧ್ಯಕ್ಷ ಡಾ. ನರೇಂದ್ರ ಶ್ಯಾಮ್‍ಸುಖ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.