ADVERTISEMENT

ಟಾಟಾ ಟ್ರಸ್ಟ್‌ಗೆ ಐ.ಟಿ ನೋಟಿಸ್‌: ಹೈಕೋರ್ಟ್ ತಡೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:43 IST
Last Updated 26 ಏಪ್ರಿಲ್ 2018, 19:43 IST

ಮುಂಬೈ: ಆರು ಟಾಟಾ ಟ್ರಸ್ಟ್‌ಗಳಿಗೆ ಆದಾಯ ತೆರಿಗೆ ಇಲಾಖೆಯು ನೀಡಿದ್ದ ಷೋಕಾಸ್‌ ನೋಟಿಸ್‌ಗೆ ಬಾಂಬೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 12ಎ ಅನ್ವಯ, ಟ್ರಸ್ಟ್‌ಗಳ ನೋಂದಣಿ ರದ್ದುಪಡಿಸುವ ಸಂಬಂಧ ನೋಟಿಸ್‌ ಜಾರಿಯಾಗಿದೆ. ಇದಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.  ಇಂತಹ ಷೋಕಾಸ್‌ ನೋಟಿಸ್‌ ನೀಡುವ ಇಲಾಖೆಯ ಕಾರ್ಯವ್ಯಾಪ್ತಿ ಬಗ್ಗೆ ಉತ್ತರ ನೀಡಲು ಪೀಠವು ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜೂನ್‌ 15ಕ್ಕೆ ನಿಗದಿಪಡಿಸಲಾಗಿದೆ.

ಟಾಟಾ ಸಮೂಹಕ್ಕೆ ಜೈಶಂಕರ್‌ ನೇಮಕ
ಮುಂಬೈ:
ಟಾಟಾ ಸಮೂಹದ ಜಾಗತಿಕ ಕಾರ್ಪೊರೇಟ್‌ ವ್ಯವಹಾರಗಳ ಅಧ್ಯಕ್ಷರನ್ನಾಗಿ ಡಾ. ಎಸ್‌. ಜೈಶಂಕರ್‌ ಅವರನ್ನು ನೇಮಿಸಲಾಗಿದೆ ಎಂದು ಟಾಟಾ ಸನ್ಸ್‌ ಪ್ರಕಟಿಸಿದೆ.

ADVERTISEMENT

ಜೈಶಂಕರ್‌ ಅವರು, 2015 ರಿಂದ 2018ರವರೆಗೆ ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಅಮೆರಿಕ ಮತ್ತು ಚೀನಾದಲ್ಲಿ ಭಾರತದ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ‘ಅವರ ವ್ಯಾಪಕ ಅನುಭವವು ಜಾಗತಿಕವಾಗಿ ಸಂಸ್ಥೆಯ ಬ್ರ್ಯಾಂಡ್‌ ಬಲಪಡಿಸಲು ನೆರವಾಗಲಿದೆ’ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.