ADVERTISEMENT

ನಿಫ್ಟಿ ಹೊಸ ದಾಖಲೆ

ಪಿಟಿಐ
Published 25 ಏಪ್ರಿಲ್ 2017, 19:53 IST
Last Updated 25 ಏಪ್ರಿಲ್ 2017, 19:53 IST
ನಿಫ್ಟಿ ಹೊಸ ದಾಖಲೆ
ನಿಫ್ಟಿ ಹೊಸ ದಾಖಲೆ   

ಮುಂಬೈ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ‘ನಿಫ್ಟಿ‘ ಮಂಗಳವಾರ 89 ಅಂಶ ಏರಿಕೆ ಕಂಡು, ಸಾರ್ವಕಾಲೀನ ಗರಿಷ್ಠ ಮಟ್ಟವಾದ 9,300 ಅಂಶಗಳಿಗೆ ಏರಿಕೆಯಾಗಿದೆ.

ಈ ಹಿಂದೆ ಏಪ್ರಿಲ್‌ 5 ರಂದು ಸೂಚ್ಯಂಕ 9,265 ಅಂಶಗಳಿಗೆ ತಲುಪಿತ್ತು. ಮಧ್ಯಂತರ ವಹಿವಾಟಿನಲ್ಲಿ 9,274 ಅಂಶಗಳ ದಾಖಲೆ ಮಟ್ಟವನ್ನೂ ತಲುಪಿತ್ತು.
ಬಿಎಸ್‌ಇ ಸೂಚ್ಯಂಕ:ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 287 ಅಂಶ ಏರಿಕೆಯಾಗಿ ಮೂರು ವಾರಗಳ ಗರಿಷ್ಠ ಮಟ್ಟವಾದ 29,943 ಅಂಶಗಳಿಗೆ ಏರಿಕೆಯಾಗಿದೆ.

ಏಪ್ರಿಲ್‌ 5 ನಂತರ ಸೂಚ್ಯಂಕದ ಗರಿಷ್ಠ ಏರಿಕೆ ಇದಾಗಿದೆ.

ADVERTISEMENT

ತ್ರೈಮಾಸಿಕ ಫಲಿತಾಂಶದ ಪ್ರಭಾವ: ನಾಲ್ಕನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌, ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆರ್ಥಿಕ  ಸಾಧನೆ  ಉತ್ತಮವಾಗಿದೆ.

ಇದರ ಜತೆಗೆ ರೂಪಾಯಿ ಮೌಲ್ಯ ಏರಿಕೆಯಿಂದಾಗಿ ಷೇರುಪೇಟೆಗಳಲ್ಲಿ ಖರೀದಿ ಚಟುವಟಿಕೆ ಚುರುಕು ಪಡೆದುಕೊಂಡಿತು ಎಂದು ತಜ್ಞರು ಹೇಳಿದ್ದಾರೆ.
ಡಾಲರ್ ಎದುರು  ರೂಪಾಯಿ ಮೌಲ್ಯ 18 ಪೈಸೆ ಹೆಚ್ಚಾಗಿ ₹64.26 ರಂತೆ ವಿನಿಮಯಗೊಂಡಿತು. ಇದು 21 ತಿಂಗಳ ಗರಿಷ್ಠ ಮಟ್ಟವಾಗಿದೆ.
2015 ಆಗಸ್ಟ್‌ 11ರಂದು ಡಾಲರ್‌ ಎದುರು ರೂಪಾಯಿ ಮೌಲ್ಯ 64.19ರಷ್ಟು ಇತ್ತು.

ಮಾರುಕಟ್ಟೆ ಮೌಲ್ಯ ದಾಖಲೆ
ಮುಂಬೈ ಷೇರುಪೇಟೆಯಲ್ಲಿ ನಡೆದ ಉತ್ತಮ ವಹಿವಾಟಿನಿಂದ ಮಾರುಕಟ್ಟೆ ಮೌಲ್ಯವು ಸಾರ್ವಕಾಲೀನ ದಾಖಲೆ ಮಟ್ಟವಾದ ₹125 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು  ₹1.11 ಲಕ್ಷ ಕೋಟಿಗಳಷ್ಟು ಏರಿಕೆ ಕಂಡಿದೆ.

ದಿನದ ವಹಿವಾಟು

1,444 ಷೇರುಗಳಿಗೆ ಲಾಭ

₹4ಸಾವಿರ ಕೋಟಿ ಬಿಎಸ್‌ಇ ವಹಿವಾಟು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.