ADVERTISEMENT

‘ನೋ ಬ್ರೋಕರ್‌’ ಸೇವೆಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST

ಬೆಂಗಳೂರು: ‘ಮಧ್ಯವರ್ತಿ ಶುಲ್ಕವಿಲ್ಲದೆ ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ಸೇವೆ ಒದಗಿಸುವ  ‘ನೋ ಬ್ರೋಕರ್‌’ ಸಂಸ್ಥೆಗೆ ಬೆಂಗಳೂರಿನಲ್ಲಿ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ  ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಸಂಸ್ಥಾಪಕರಾದ ಅಖಿಲ್‌ ಗುಪ್ತಾ ಮತ್ತು ಅಮಿತ್‌ ಅಗರವಾಲ್‌  ತಿಳಿಸಿದ್ದಾರೆ.
ಕೆಲಸ ಮಾಡುವ ಕಚೇರಿ, ಉದ್ಯೋಗ ಸ್ಥಳಗಳಿಗೆ ಸಮೀಪದಲ್ಲಿಯೇ ಬಾಡಿಗೆದಾರರಿಗೆ ಮನೆಗಳನ್ನು ಮತ್ತು ಮನೆ ಮಾಲೀಕರಿಗೆ ಬಾಡಿಗೆದಾರರನ್ನು  ಕೊಡಿಸುವ ಕೆಲಸವನ್ನು  ಅಂತರ್ಜಾಲ ತಾಣ ‘ನೋ ಬ್ರೋಕರ್‌’   ಯಾವುದೇ ಶುಲ್ಕವಿಲ್ಲದೆ ನಿರ್ವಹಿಸುತ್ತಿದೆ.

‘ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಜತೆಗೆ   ಬಾಡಿಗೆದಾರರು ಮತ್ತು ಮಾಲೀಕರಿಂದ ವಸೂಲಿ ಮಾಡುವ ದುಬಾರಿ ಕಮಿಷನ್‌ಗೆ ಇದರಿಂದ ಕಡಿವಾಣ ಬೀಳಲಿದೆ’ ಎಂದು ಅವರು ತಿಳಿಸಿದರು. 

ಸಂಸ್ಥೆ ನಡೆಸಿದ ಸಮೀಕ್ಷೆಯನ್ನು ಬುಧವಾರ ಬಿಡುಗಡೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಬಾಡಿಗೆದಾರರು ಮತ್ತು ಮನೆಯ ಮಾಲೀಕರು ₹200 ನೀಡಿ ನೋಂದಣಿ ಮಾಡಿಸಿದರೆ ಸಾಕು, ಮಧ್ಯವರ್ತಿ ಶುಲ್ಕ ನೀಡಬೇಕಿಲ್ಲ. ಬೇಡಿಕೆಗೆ ಅನುಸಾರವಾಗಿ ಇಬ್ಬರ ನಡುವೆ ಕರಾರು ಪತ್ರವನ್ನೂ ಸಂಸ್ಥೆಯೇ ಸಿದ್ಧಪಡಿಸಿ ಕೊಡಲಿದೆ’ ಎಂದು ಅಖಿಲ್‌ ಗುಪ್ತಾ ತಿಳಿಸಿದರು.
ಇದರಿಂದ ಸಾಕಷ್ಟು ಸಮಯ, ಹಣ , ಇಂಧನ ಉಳಿತಾಯದ ಜತೆಗೆ  ಪರಿಸರ ಸಂರಕ್ಷಣೆ, ಸಂಚಾರ ದಟ್ಟನೆ ನಿಯಂತ್ರಣ  ಕ್ಕೆ ಸಂಸ್ಥೆ ಪರೋಕ್ಷವಾಗಿ ನೆರವಾಗಲಿದೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತೇಜಸ್ವಿ ರಾಠೋಡ್‌ ತಿಳಿಸಿದರು. ಮಾಹಿತಿಗೆ 92417 00000.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.