ADVERTISEMENT

‌ನ. 30ರಿಂದ ಇನ್ಫೊಸಿಸ್‌ ಷೇರು ಮರುಖರೀದಿ

ಪಿಟಿಐ
Published 17 ನವೆಂಬರ್ 2017, 19:31 IST
Last Updated 17 ನವೆಂಬರ್ 2017, 19:31 IST
‌ನ. 30ರಿಂದ ಇನ್ಫೊಸಿಸ್‌ ಷೇರು ಮರುಖರೀದಿ
‌ನ. 30ರಿಂದ ಇನ್ಫೊಸಿಸ್‌ ಷೇರು ಮರುಖರೀದಿ   

ನವದೆಹಲಿ: ಸಾಫ್ಟ್‌ವೇರ್‌ ದೈತ್ಯಸಂಸ್ಥೆ ಇನ್ಫೊಸಿಸ್‌ನ ಮೊದಲ ಷೇರು ಮರುಖರೀದಿ ಕೊಡುಗೆಯು ನವೆಂಬರ್‌ 30 ರಿಂದ ಆರಂಭಗೊಂಡು ಡಿಸೆಂಬರ್‌ 14ಕ್ಕೆ ಅಂತ್ಯಗೊಳ್ಳಲಿದೆ.

ಪ್ರತಿ ಷೇರಿಗೆ ₹ 1,150ರ ದರದಲ್ಲಿ 11.30 ಕೋಟಿ ಷೇರುಗಳನ್ನು ಮರು ಖರೀದಿಸಲಾಗುತ್ತಿದೆ. ಷೇರು ಮರು ಖರೀದಿಯು ಸಂಸ್ಥೆಯ ಕೆಲ ಸಹ ಸ್ಥಾಪಕರ ಬಹುದಿನಗಳ  ಬೇಡಿಕೆಯಾಗಿತ್ತು. ಸಂಸ್ಥೆಯಲ್ಲಿನ ಹೆಚ್ಚುವರಿ ನಗದನ್ನು ಷೇರುದಾರರಿಗೆ ಮರಳಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದರು.

ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), ₹ 16 ಸಾವಿರ ಕೋಟಿ ಮೊತ್ತದ ಷೇರು ಮರು ಖರೀದಿ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದೆ. ಇತರ ಐ.ಟಿ ಸಂಸ್ಥೆಗಳಾದ ವಿಪ್ರೊ,  ಕಾಗ್ನಿಜಂಟ್‌ ಮತ್ತು ಮೈಂಡ್‌ಟ್ರೀ ಇದೇ ಬಗೆಯ ಷೇರು ಮರುಖರೀದಿ ಕೊಡುಗೆ ಪ್ರಕಟಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.