ADVERTISEMENT

ಪಿಎಫ್‌ ಸದಸ್ಯರಿಗೆ ಗೃಹ ಸಾಲ ಸಬ್ಸಿಡಿ: ‘ಹುಡ್ಕೊ’ ಜತೆ ಒಪ್ಪಂದ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಪಿಎಫ್‌ ಸದಸ್ಯರಿಗೆ ಗೃಹ ಸಾಲ ಸಬ್ಸಿಡಿ: ‘ಹುಡ್ಕೊ’ ಜತೆ ಒಪ್ಪಂದ
ಪಿಎಫ್‌ ಸದಸ್ಯರಿಗೆ ಗೃಹ ಸಾಲ ಸಬ್ಸಿಡಿ: ‘ಹುಡ್ಕೊ’ ಜತೆ ಒಪ್ಪಂದ   

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ತನ್ನ ಚಂದಾದಾರರಿಗೆ ಗೃಹ ಸಾಲ ಸಬ್ಸಿಡಿ ಸೌಲಭ್ಯ ಒದಗಿಸಲು  ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) ಜತೆ ಒಪ್ಪಂದ ಮಾಡಿಕೊಂಡಿದೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) ಕೈಗೆಟುಕುವ ಮನೆ ಖರೀದಿಗೆ ಪಡೆಯುವ ಸಾಲಕ್ಕೆ ₹ 2.67 ಲಕ್ಷದಷ್ಟು ಸಬ್ಸಿಡಿ ಪಡೆಯಲು ಈ ಒಪ್ಪಂದ ನೆರವಾಗಲಿದೆ.

ಚಂದಾದಾರರ ಆದಾಯದ ಮಟ್ಟ ಆಧರಿಸಿ ಈ ಸಾಲಕ್ಕೆ ಸಂಬಂಧಿಸಿದ ಸಬ್ಸಿಡಿ ದೊರೆಯಲಿದೆ.

ADVERTISEMENT

ಮಧ್ಯಮ, ಕಡಿಮೆ ಆದಾಯ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಈ ಸೌಲಭ್ಯ ಒದಗಿಸಲು ‘ಹುಡ್ಕೊ’ ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಈ ಒಪ್ಪಂದದ ಪ್ರಕಾರ, ಪಿಎಫ್‌ ಸದಸ್ಯರು ಭವಿಷ್ಯ ನಿಧಿ ಆರಂಭಿಸಿರುವ ಗೃಹ ಸಾಲ ಯೋಜನೆ ಮತ್ತು ‘ಪಿಎಂಎವೈ’ದ ಪ್ರಯೋಜನಗಳನ್ನು ಒಟ್ಟಿಗೆ ಪಡೆಯಬಹುದು.

ಪಿಎಫ್ ನಿಧಿಯಲ್ಲಿ ಸಂಗ್ರಹಗೊಂಡ ಮೊತ್ತದ ಶೇ 90ರಷ್ಟನ್ನು ಮನೆ ಖರೀದಿಯ ಆರಂಭಿಕ ಮೊತ್ತ ಪಾವತಿಸಲು ಬಳಸಿಕೊಳ್ಳಬಹುದು. ಜತೆಗೆ ಗೃಹ ಸಾಲದ ತಿಂಗಳ ಸಮಾನ ಕಂತು (ಇಎಂಐ) ಪಾವತಿಸಲು ‘ಪಿಎಫ್‌’ ಖಾತೆ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.