ADVERTISEMENT

ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ

ಪಿಟಿಐ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ
ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ   

ನವದೆಹಲಿ: ಯುಟಿಲಿಟಿ ವಾಹನ, ಕಾರು ಮತ್ತು ವ್ಯಾನ್‌ ಮಾರಾಟದಲ್ಲಿ ಹೆಚ್ಚಳವಾಗಿರುವುದರಿಂದ ಪ್ರಯಾಣಿಕ ವಾಹನ ಮಾರಾಟ ಏಪ್ರಿಲ್‌ನಲ್ಲಿ ಶೇ 7.5 ರಷ್ಟು ಪ್ರಗತಿ ಕಂಡಿದೆ.

ಮಾರ್ಚ್‌ನಲ್ಲಿ 2.77 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದವು. ಏಪ್ರಿಲ್‌ನಲ್ಲಿ ಇದು 2.98 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‌ಐಎಎಂ) ಮಾಹಿತಿ ನೀಡಿದೆ.

ದೇಶಿ ಕಾರು ಮಾರಾಟ ಶೇ 4.89 ರಷ್ಟು ಹೆಚ್ಚಾಗಿದೆ. ಯುಟಿಲಿಟಿ ವಾಹನಗಳ ಮಾರಾಟ ಶೇ 11.92 ರಷ್ಟು ಹಾಗೂ ವ್ಯಾನ್‌ ಮಾರಾಟ ಶೇ 18.99 ರಷ್ಟು ಏರಿಕೆ ಕಂಡಿವೆ.

ADVERTISEMENT

ರಫ್ತು ಇಳಿಕೆ: ಪ್ರಯಾಣಿಕ ವಾಹನಗಳ ರಫ್ತು ವಹಿವಾಟು 50,921 ರಿಂದ 60,538ಕ್ಕೆ ಶೇ 15.89 ರಷ್ಟು ಇಳಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷವು ಸಕಾರಾತ್ಮಕ ಮಟ್ಟದಲ್ಲಿ ಆರಂಭವಾಗಿದ್ದು, ಇದೇ ಲಯವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ’ ಎಂದು ಎಸ್‌ಐಎಎಂ ಉಪ ಪ್ರಧಾನ ನಿರ್ದೇಶಕ ಸುಗತೊ ಸೇನ್‌ ಹೇಳಿದ್ದಾರೆ.

‘ಕಾರ್‌, ಯುಟಿಲಿಟಿ ವಾಹನಗಳು ಮತ್ತು ವ್ಯಾನ್‌ಗಳ ಮಾರಾಟವು ಏಪ್ರಿಲ್‌ ತಿಂಗಳಿನಲ್ಲಿ ಪ್ರಯಾಣಿಕ ವಾಹನ ಮಾರಾಟ ಹೆಚ್ಚಳಕ್ಕೆ ಕೊಡುಗೆ ನೀಡಿವೆ’ ಎಂದೂ ಅವರು ಹೇಳಿದ್ದಾರೆ.

**

ಪ್ರಸಕ್ತ ಹಣಕಾಸು ವರ್ಷವು ಸಕಾರಾತ್ಮಕ ಮಟ್ಟದಲ್ಲಿ ಆರಂಭವಾಗಿದ್ದು, ಇದೇ ಲಯವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸವಿದೆ.

–ಸುಗತೊ ಸೇನ್‌, ಎಸ್‌ಐಎಎಂ ಉಪ ಪ್ರಧಾನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.