ADVERTISEMENT

ಬಜೆಟ್ ನಿರೀಕ್ಷೆಯ ಪ್ರಭಾವದಲ್ಲಿ ಮುಂಬೈ ಷೇರುಪೇಟೆ ವಹಿವಾಟು

​ಪ್ರಜಾವಾಣಿ ವಾರ್ತೆ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST
ಬಜೆಟ್ ನಿರೀಕ್ಷೆಯ ಪ್ರಭಾವದಲ್ಲಿ ಮುಂಬೈ ಷೇರುಪೇಟೆ ವಹಿವಾಟು
ಬಜೆಟ್ ನಿರೀಕ್ಷೆಯ ಪ್ರಭಾವದಲ್ಲಿ ಮುಂಬೈ ಷೇರುಪೇಟೆ ವಹಿವಾಟು   

ನವದೆಹಲಿ : ಪ್ರಮುಖ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಮತ್ತು ಮುಂಬರುವ ಕೇಂದ್ರ ಬಜೆಟ್‌ ಬಗ್ಗೆ ಹೂಡಿಕೆದಾರರ ನಿರೀಕ್ಷೆಗಳು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಪ್ರಭಾವ ಬೀರುವ ಪ್ರಮುಖ ವಿದ್ಯಮಾನಗಳಾಗಿವೆ ಎಂದು ತಜ್ಞರು ಹೇಳಿದ್ದಾರೆ.

ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ರಿಲಯನ್‌ ಇಂಡಸ್ಟ್ರೀಸ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಅದಾನಿ ಪವರ್ ಕಂಪೆನಿಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ. ಡಿಸೆಂಬರ್‌ ತಿಂಗಳ ಸಗಟು ಹಣದುಬ್ಬರದ ಅಂಕಿ–ಅಂಶ ಸೋಮವಾರ ಹೊರಬೀಳಲಿದೆ. ಇದೂ ಸಹ ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ.

‘ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್  ಟ್ರಂಪ್‌   ಈ ವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಆರ್ಥಿಕ ನೀತಿಗಳು ಜಾಗತಿಕ ಮಾರುಕಟ್ಟೆ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ’ ಎಂದು ಜಿಯೋಜಿತ್‌ ಬಿಎನ್‌ಪಿ ಪರಿಬಾಸ್ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.