ADVERTISEMENT

ಬಿಎಸ್‌ಇ ಸೂಚ್ಯಂಕ 457 ಅಂಶ ಏರಿಕೆ

ಕಳೆದ 7 ದಿನಗಳಿಂದ ಸತತ ಏರಿಕೆ; ಹೂಡಿಕೆದಾರರಿಗೆ ಭರ್ಜರಿ ಲಾಭ

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 9:41 IST
Last Updated 22 ಜೂನ್ 2015, 9:41 IST

ಮುಂಬೈ (ಐಎಎನ್‌ಎಸ್‌): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ ಮಧ್ಯಾಹ್ನದ ವಹಿವಾಟಿನಲ್ಲಿ ಭರ್ಜರಿ 457 ಅಂಶಗಳಷ್ಟು ಏರಿಕೆ ಕಂಡಿದ್ದು 27,773 ಅಂಶಗಳನ್ನು ತಲುಪಿದೆ.

ಕಳೆದ 7 ವಹಿವಾಟುಗಳಲ್ಲೂ ಸೂಚ್ಯಂಕ ಸತತ ಏರಿಕೆ ಕಂಡಿದೆ. ದಿನದ ವಹಿವಾಟಿನಲ್ಲಿ ಬ್ಯಾಂಕಿಂಗ್‌ ವಲಯದ ಷೇರುಗಳು ಗರಿಷ್ಠ ಲಾಭ ಮಾಡಿಕೊಂಡವು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 120 ಅಂಶಗಳಷ್ಟು ಏರಿಕೆ ಕಂಡು 8,350ರ ಗಡಿ ಸಮೀಪದಲ್ಲಿ ವಹಿವಾಟು  ನಡೆಸಿತು.

ಜೂನ್‌ 19ರ ನಂತರ ಮುಂಬೈ ಷೇರುಪೇಟೆಯಲ್ಲಿ ಸತತ ಏರಿಕೆ ದಾಖಲಾಗಿದೆ. ನಿರೀಕ್ಷೆಗಿಂತ ಉತ್ತಮ ಮುಂಗಾರು ಲಭಿಸಿರುವುದು ಮತ್ತು ಭತ್ತದ  ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 50 ಹೆಚ್ಚಿಸಿರುವುದು ಇದರ ಜತೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ವರ್ಷದಲ್ಲಿ ನಾಲ್ಕನೆಯ ಬಾರಿ ಬಡ್ಡಿ ದರ ಇಳಿಸಿರುವುದು ಪೇಟೆಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಿದೆ ಎಂದು ಷೇರು ದಲ್ಲಾಳಿ ಸಂಸ್ಥೆ ಏಂಜೆಲ್‌ ಬ್ರೊಕಿಂಗ್ಸ್‌ ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT