ADVERTISEMENT

ಬೆಂಗಳೂರಿನಲ್ಲಿ ಹುವಾವೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

ಬೆಂಗಳೂರು: ಚೀನಾ ಮೂಲದ ಹುವಾವೆ ಟೆಲಿಕಾಂ ಕಂಪೆನಿ ಚೀನಾ, ಮೆಕ್ಸಿಕೊ ಮತ್ತು ರೋಮಾನಿಯಾ ನಂತರ ಇದೀಗ ಬೆಂಗಳೂರಿನಲ್ಲಿ ₹136 ಕೋಟಿ ವೆಚ್ಚದ ಜಾಗತಿಕ ಸೇವಾ ಕೇಂದ್ರ ಆರಂಭಿಸಿದೆ.

ಮೂರು ಕೇಂದ್ರಗಳಿಗೆ ಹೋಲಿಸಿದರೆ ಬೆಂಗಳೂರು ಕೇಂದ್ರ ಹೆಚ್ಚು ಯೋಜನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹುವಾವೆ ಹೇಳಿಕೊಂಡಿದೆ.

ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಹುವಾವೆ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಲಸನಿರ್ವಹಿಸಲಿದ್ದಾರೆ ಎಂದು ಕಂಪೆನಿ ಸಿಇಒ ಜೇ ಚೆನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.