ADVERTISEMENT

ಬೆನ್ಸ್ ಬಸ್ ತಯಾರಿಕಾ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 9:47 IST
Last Updated 27 ಮೇ 2015, 9:47 IST

ಚೆನ್ನೈ: ಡೈಮ್ಲರ್ ಇಂಡಿಯಾ ವಾಹನ ಉತ್ಪಾದನಾ ಕಂಪೆನಿಯು ಚೆನ್ನೈ ಹೊರವಲಯದ ಒರಗಡಮ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಮರ್ಸಿಡೆಸ್ ಬೆನ್ಸ್ ಮತ್ತು ಭಾರತ್ ಬೆನ್ಸ್ ಬಸ್ ತಯಾರಿಕಾ ಘಟಕಕ್ಕೆ ಬುಧವಾರ ಚಾಲನೆ ನೀಡಲಾಯಿತು.

425 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಘಟಕಕ್ಕೆ ಡೈಮ್ಲರ್ ಬಸೆಸ್ ನ ಮುಖ್ಯಸ್ಥ ಹಾರ್ಟ್ಮತ್ ಷಿಕ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, '27 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಘಟಕದಲ್ಲಿ ಸದ್ಯ ವಾರ್ಷಿಕ 1,500 ಬಸ್ ತಯಾರಿಸುವ ಗುರಿ ಹೊಂದಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಭಾರತ್ ಬೆನ್ಸ್ 914 ಸ್ಕೂಲ್, ಕಾರ್ಪೊರೇಟ್ ಮತ್ತು ಟ್ರಾವೆಲ್ ಬಸ್, ಐಷಾರಾಮಿ ಮರ್ಸಿಡೆಸ್ ಬೆನ್ಸ್ ಬಸ್- 917, ಭಾರತ್ ಬೆನ್ಸ್- 3143, 2536 ಮತ್ತು 4940 ಟ್ರಕ್ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.