ADVERTISEMENT

ಬೇನಾಮಿ ವಹಿವಾಟು ಮಸೂದೆಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ನವದೆಹಲಿ (ಪಿಟಿಐ): ಬೇನಾಮಿ ವಹಿವಾಟನ್ನು ಪರಿಣಾಮಕಾರಿಯಾಗಿ ತಡೆಯಲು, ‘ಬೇನಾಮಿ ವಹಿವಾಟು ತಡೆ  ಮಸೂದೆ 2015ಕ್ಕೆ’ ತಿದ್ದುಪಡಿಗಳನ್ನು ತರುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯು ಈ ತಿದ್ದುಪಡಿಗಳಿಗೆ ಸಮ್ಮತಿ ನೀಡಿದೆ.
ಈ ತಿದ್ದುಪಡಿ ಮಸೂದೆಯು, ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ಕೊಡಲಿದೆ.

ತಮ್ಮ ಅಘೋಷಿತ ವರಮಾನ ಬಹಿರಂಗಪಡಿಸುವವರು,  ಅದರ ಜತೆಗೆ ಬೇನಾಮಿ ಆಸ್ತಿ ವಿವರಗಳನ್ನೂ  ನೀಡಿದರೆ ಅವರಿಗೆ ಬೇನಾಮಿ ಕಾಯ್ದೆಯಡಿ ರಕ್ಷಣೆ ದೊರೆಯಲಿದೆ.

ನಿಜವಾದ ಫಲಾನುಭವಿ ಬದಲಿಗೆ ಬೇರೊಬ್ಬರ ಹೆಸರಿನಲ್ಲಿ ಆಸ್ತಿಪಾಸ್ತಿ ಖರೀದಿಸುವುದು, ವಹಿವಾಟು ನಡೆಸುವುದಕ್ಕೆ ಬೇನಾಮಿ ವಹಿವಾಟು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.