ADVERTISEMENT

ಬ್ಯಾಂಕ್‌ ಆಫ್‌ ಬರೋಡಾಂದ ಇ–ಲಾಬಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ, ನಗರದ ಬಿಟಿಎಂ ಲೆಔಟ್‌ನಲ್ಲಿ ಗ್ರಾಹಕ ಸ್ನೇಹಿ ಇ–ಲಾಬಿ ಸೇವೆ ಆರಂಭಿಸಿದೆ.

ನಗರದಲ್ಲಿ ಶುಕ್ರವಾರ ಇ–ಲಾಬಿ ಉದ್ಘಾಟಿಸಿದ ಬ್ಯಾಂಕ್‌ನ ಕಾರ್ಯ­ನಿರ್ವಾಹಕ ನಿರ್ದೇಶಕ ರಾಜನ್‌ ಧವನ್‌, ಇಲ್ಲಿ ಗ್ರಾಹಕರು ದಿನದ 24 ಗಂಟೆ, ವಾರದ ಏಳೂ ದಿನ ನಗದು ಮತ್ತು ಚೆಕ್ ಜಮಾ, ಪಾಸ್‌ಬುಕ್ ಅಪ್‌ಡೇಟ್ ಸೇವೆಯನ್ನು ಸ್ವಂತವಾಗಿ ನಿರ್ವಹಿಸಿಕೊಳ್ಳಬಹುದು ಎಂದರು.

ಬೆಂಗಳೂರಿನ ಎರಡು ಶಾಖೆ ಸೇರಿದಂತೆ ರಾಜ್ಯದಲ್ಲಿ ಬ್ಯಾಂಕ್‌ನ103 ಶಾಖೆಗಳಿವೆ. ವಹಿವಾಟು ವೃದ್ಧಿಗಾಗಿ ಮುಂದಿನ ವರ್ಷ 200 ಶಾಖೆ ಆರಂಭಿಸುವ ಯೋಜನೆ ಇದೆ ಎಂದರು. ಶಾಖೆಗಳ ಸ್ಥಾಪನೆ, ಉದ್ಯೋಗಿಗಳ ನೇಮಕ, ನಿರ್ವಹಣೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಐಟಿ ಕೇಂದ್ರ ಬೆಂಗಳೂರಿನಲ್ಲಿ ಹೆಚ್ಚು ಇ–ಲಾಬಿ ಸ್ಥಾಪನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ವಲಯದಲ್ಲಿ ಒಟ್ಟು 271 ಶಾಖೆಗಳಿದ್ದು, ಬ್ಯಾಂಕ್‌ ₨35 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ಇನ್ನಷ್ಟು ಶಾಖೆ ತೆರೆಯುವ ಯೋಜನೆ ಇದೆ ಎಂದು ಪ್ರಧಾನ ನಿರ್ವಾಹಕ ಉಮಾಕಾಂತ್‌ ಕೆ.ಬಿಜಾಪುರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.