ADVERTISEMENT

ಮರ್ಸಿಡಿಸ್‌ ಬೆಂಜ್‌ನ ಎರಡು ರೇಸ್ ಕಾರು ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಮರ್ಸಿಡಿಸ್‌ ಬೆಂಜ್‌ನ ಎರಡು ರೇಸ್ ಕಾರು ಮಾರುಕಟ್ಟೆಗೆ
ಮರ್ಸಿಡಿಸ್‌ ಬೆಂಜ್‌ನ ಎರಡು ರೇಸ್ ಕಾರು ಮಾರುಕಟ್ಟೆಗೆ   

ಚೆನ್ನೈ: ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌, ಎರಡು ಹೊಸ ರೇಸ್ ಕಾರುಗಳನ್ನು ಬಿಡುಗಡೆ ಮಾಡಿದೆ.

ಎಎಂಜಿ ಸಿಎಲ್‌ಎ 45 ಬೆಲೆ ₹ 77.85 ಲಕ್ಷದಿಂದ ಮತ್ತು ಜಿಎಲ್‌ಎ 45 ಬೆಲೆ ₹ 80.67 ಲಕ್ಷದಿಂದ ಆರಂಭವಾಗುತ್ತದೆ.

ಎಎಂಜಿ 2.0 ಲೀಟರ್‌ ಸಿಲಿಂಡ್ ಟರ್ಬೊ ಎಂಜಿನ್‌ 6000 ಆರ್‌ಪಿಎಂ ಮತ್ತು 475 ಎನ್‌ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಗರಿಷ್ಠ ವೇಗ ಮಿತಿ ಪ್ರತಿ ಗಂಟೆಗೆ 250 ಕಿ.ಮೀ.

ADVERTISEMENT

‘ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಎಎಂಜಿಯ ಉತ್ತಮ ವಾಹನಗಳನ್ನು ಭಾರತದ ಗ್ರಾಹಕರಿಗೆ ನೀಡುವ ನಮ್ಮ ಬದ್ಧತೆ ಮುಂದುವರಿಸಲಾಗುವುದು’‍ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರೋಲ್ಯಾಂಡ್‌ ಫೋಲ್ಗರ್‌ ತಿಳಿಸಿದ್ದಾರೆ.

‘ಭಾರತದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಎರಡೂ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಾರ್‌ಗಳು ಯುವ ಸಮೂಹವನ್ನು ಹೆಚ್ಚು ಆಕರ್ಷಿಸಲಿವೆ. ಈ ಮಾದರಿಗಳಿಂದ ಭಾರತದಲ್ಲಿ ಎಎಂಜಿ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.