ADVERTISEMENT

ಮಹೀಂದ್ರ ಇ2ಒ ಪ್ಲಸ್‌ ಕಾರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಮಹೀಂದ್ರ ಇ2ಒಪ್ಲಸ್‌ ಕಾರಿನೊಂದಿಗೆ ನಿಯೋಜಿತ ಸಿಇಒ ಮಹೇಶ್‌ ಬಾಬು, ಉಪಾಧ್ಯಕ್ಷ ಧರ್ಮೇಂದ್ರ ಮಿಶ್ರಾ ಮತ್ತು ಸಿಇಒ ಅರವಿಂದ್‌ ಮ್ಯಾಥ್ಯೂ. ಪ್ರಜಾವಾಣಿ ಚಿತ್ರ
ಮಹೀಂದ್ರ ಇ2ಒಪ್ಲಸ್‌ ಕಾರಿನೊಂದಿಗೆ ನಿಯೋಜಿತ ಸಿಇಒ ಮಹೇಶ್‌ ಬಾಬು, ಉಪಾಧ್ಯಕ್ಷ ಧರ್ಮೇಂದ್ರ ಮಿಶ್ರಾ ಮತ್ತು ಸಿಇಒ ಅರವಿಂದ್‌ ಮ್ಯಾಥ್ಯೂ. ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹೀಂದ್ರ ಎಲೆಕ್ಟ್ರಿಕ್‌ ಕಂಪೆನಿಯು  ಇ2ಒ ಪ್ಲಸ್‌ ಎಂಬ ಹೊಸ ವಿದ್ಯುತ್‌ ಚಾಲಿತ ಕಾರನ್ನು ಸೋಮವಾರ ಬಿಡುಗಡೆ ಮಾಡಿತು. ಇದರ ಬೆಲೆ ₹6.73 ಲಕ್ಷದಿಂದ ₹9.51 ಲಕ್ಷದವರೆಗಿದೆ (ಬೆಂಗಳೂರು ಎಕ್ಸ್‌ ಷೋರೂಂ).

ಒಮ್ಮೆ ಚಾರ್ಜ್‌ ಮಾಡಿದರೆ 140ಕಿ.ಮೀವರೆಗೆ ಚಲಿಸಬಲ್ಲದು. ಇದರ ಗರಿಷ್ಠ ವೇಗ ಮಿತಿ ಗಂಟೆಗೆ 85 ಕಿ.ಮೀ ಇದೆ ಎಂದು ಮಹೀಂದ್ರ ಎಲೆಕ್ಟ್ರಿಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅರವಿಂದ್‌ ಮ್ಯಾಥ್ಯೂ ಅವರು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪಿ2, ಪಿ4, ಪಿ6 ಮತ್ತು ಪಿ8 ಎಂದು ನಾಲ್ಕು ಮಾದರಿಗಳಲ್ಲಿ ಲಭ್ಯವಿದೆ. ಪಿ8 ಬೆಲೆ ಸದ್ಯಕ್ಕೆ ತಿಳಿಸಿಲ್ಲ.

ಇದನ್ನೂ ಒಳಗೊಂಡು ಈ ವರ್ಷ ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡಿದ್ದೇವೆ. ಗ್ರಾಹಕರಿಗೆ ಉತ್ತಮ ಆಯ್ಕೆಗಳನ್ನು ನೀಡಲು ಮುಂದಿನ ದಿನಗಳಲ್ಲಿ ಇನ್ನೂ ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.