ADVERTISEMENT

ಮಾರ್ಕಟೆಲ್‌ನಿಂದ ₹400ಕ್ಕೆ ಅನಿಯಮಿತ ಡೇಟಾ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 20:36 IST
Last Updated 16 ಸೆಪ್ಟೆಂಬರ್ 2017, 20:36 IST
ಮಾರ್ಕಟೆಲ್‌ನಿಂದ ₹400ಕ್ಕೆ ಅನಿಯಮಿತ ಡೇಟಾ
ಮಾರ್ಕಟೆಲ್‌ನಿಂದ ₹400ಕ್ಕೆ ಅನಿಯಮಿತ ಡೇಟಾ   

ಬೆಂಗಳೂರು: ವಾಣಿಜ್ಯ ವೈಫೈ ಟೆಲಿ ಡೇಟಾ ಸರ್ವೀಸ್‌ ಸಂಸ್ಥೆಯಾದ ‘ಮಾರ್ಕಟೆಲ್‌’ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಬೆಲೆಯಲ್ಲಿ ವೈಫೈ ಒದಗಿಸಲು ಮುಂದಾಗಿದೆ. ಗ್ರಾಹಕರು ತಿಂಗಳಿಗೆ ₹400 ಪಾವತಿಸಿದರೆ, ಅನಿಯಮಿತ ಡೇಟಾ ಹಾಗೂ ಡೌನ್‌ಲೋಡ್‌ ಸೌಲಭ್ಯ ಪಡೆಯಬಹುದು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರ್ಕಟೆಲ್‌ ಅಧ್ಯಕ್ಷ ನಾರಾಯಣನ್‌ ರಾಜಗೋಪಾಲನ್‌, ‘ತಮಿಳುನಾಡಿನ ಪರಮಪತಿ ವೇಲೂರು ಗ್ರಾಮದಲ್ಲಿ ಪ್ರಾಯೋಗಿಕವಾಗಿ ವೈಫೈ ಹಾಟ್‌ಸ್ಪಾಟ್‌ ಸ್ಥಾಪಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ತೆರೆಯಲಾಗಿದ್ದು, ಕತ್ರಿಗುಪ್ಪೆಯಲ್ಲಿ ವೈಫೈ ಹಾಟ್‌ಸ್ಪಾಟ್‌ ಸ್ಥಾಪಿಸಲಾಗಿದೆ’ ಎಂದರು.

‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಫ್ರಾಂಚೈಸಿಗಳ ಮೂಲಕ ವೈಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುತ್ತದೆ. ಅರ್ಧ ಕಿ.ಮೀ. ವ್ಯಾಪ್ತಿಗೆ ಒಂದು ಆಂಟೆನಾ ಆಳವಡಿಸಲಾಗುತ್ತದೆ. ಒಂದು ಆಂಟೆನಾದಿಂದ 2,000 ಮಂದಿ ವೈಫೈ ಸಂಪರ್ಕ ಪಡೆಯಬಹುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.