ADVERTISEMENT

ಮೂರು ವಿಮಾ ಕಂಪನಿಗಳ ವಿಲೀನ ಪ್ರಕ್ರಿಯೆ ಆರಂಭ

ಪಿಟಿಐ
Published 24 ಏಪ್ರಿಲ್ 2018, 19:30 IST
Last Updated 24 ಏಪ್ರಿಲ್ 2018, 19:30 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಮಂಗಳವಾರ ಸಂಬಂಧಪಟ್ಟ ಅಧಿಕಾರಿಗಳು ಪ್ರಾಥಮಿಕ ಹಂತದ ಸಭೆ ನಡೆಸಿ ವಿಲೀನ ಪ್ರಸ್ತಾವನೆಯ ಕುರಿತು ಚರ್ಚೆ ನಡೆಸಲಾಗಿದೆ. ಅಂತಿಮ ರೂಪುರೇಷೆಯನ್ನು ಸರ್ಕಾರ ಇನ್ನಷ್ಟೇ ಸಿದ್ಧಪಡಿಸಬೇಕಿದೆ ಎಂದು ಮೂಲಗಳು ಹೇಳಿವೆ.

ನ್ಯಾಷನಲ್‌ ಇನ್ಶುರನ್ಸ್ ಕಂಪನಿ ಲಿಮಿಟೆಡ್‌, ಯುನೈಟೆಡ್‌ ಇಂಡಿಯಾ ಅಶ್ಯುರನ್ಸ್‌ ಕಂಪನಿ ಲಿಮಿಟೆಡ್‌ ಮತ್ತು ಓರಿಯಂಟಲ್‌ ಇಂಡಿಯಾ ಇನ್ಶುರನ್ಸ್‌ ಕಂಪನಿ ಲಿಮಿಟೆಡ್‌ಗಳನ್ನು ವಿಲೀನಗೊಳಿಸಿ ಒಂದೇ ವಿಮಾ ಕಂಪನಿ ರಚನೆ ಮಾಡುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು 2018–19ರ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದರು.

ADVERTISEMENT

ಈ ಮೂರು ಕಂಪನಿಗಳು 2016–17ರಲ್ಲಿ ಒಟ್ಟು ₹ 44 ಸಾವಿರ ಕೋಟಿ ಮೊತ್ತದ ಪ್ರೀಮಿಯಂ ಸಂಗ್ರಹಿಸಿದ್ದವು. ಸಾಮಾನ್ಯ ವಿಮಾ ವಿಮಾ ಉದ್ಯಮದಲ್ಲಿ ಶೇ 35 ರಷ್ಟು ಪಾಲು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.