ADVERTISEMENT

ರೈಲ್ವೆ ಬಜೆಟ್‌ ವಿಲೀನ: ನವೆಂಬರ್‌ನಲ್ಲಿ ವರದಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:54 IST
Last Updated 27 ಸೆಪ್ಟೆಂಬರ್ 2016, 19:54 IST

ಮಂಗಳೂರು: ‘ರೈಲ್ವೆ ಬಜೆಟ್‌ ಅನ್ನು ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಸಂಸತ್ತಿನ  ಹಣಕಾಸು ಸ್ಥಾಯಿ ಸಮಿತಿಯ ವರದಿಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಲ್ಲಿಸಲಾಗುವುದು’ ಎಂದು  ಸಮಿತಿ ಅಧ್ಯಕ್ಷ  ಎಂ. ವೀರಪ್ಪ ಮೊಯಿಲಿ ತಿಳಿಸಿದರು.

ಮಂಗಳವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಪ್ರತ್ಯೇಕ ರೈಲ್ವೆ ಬಜೆಟ್‌ ಮಂಡನೆ ಬ್ರಿಟಿಷರ ಕಾಲದಿಂದ ನಡೆದುಕೊಂಡು ಬಂದಿದೆ. ಇದೀಗ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಬಜೆಟ್‌ ವಿಲೀನ ಮಾಡುತ್ತಿರುವುದು ಬಹುದೊಡ್ಡ ಬದಲಾವಣೆಯಾಗಿದೆ’ ಎಂದರು.

‘ಸ್ಥಾಯಿ ಸಮಿತಿಯು ಎರಡುಮೂರು ಬಾರಿ ಸಭೆ ನಡೆಸಿ, ವರದಿ ಸಿದ್ಧಪಡಿಸಲಿದೆ. ಸ್ಥಾಯಿ ಸಮಿತಿ ಸಭೆಯನ್ನು ಇದೇ 29 ರಂದು ಕರೆಯಲಾಗಿದೆ. ಬಜೆಟ್‌ ವಿಲೀನದಿಂದ ಹಣಕಾಸು ಸ್ಥಿತಿಗತಿಯ ಮೇಲಿನ ಪರಿಣಾಮ ಕುರಿತು ರೈಲ್ವೆ ಮಂಡಳಿ ಹಾಗೂ ಹಣಕಾಸು ಸಚಿವಾಲಯದ ಜತೆ ಚರ್ಚೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.