ADVERTISEMENT

ಲೆಕ್ಕಕ್ಕೆ ಸಿಗದ ಹಣದ ಲೆಕ್ಕ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2016, 19:30 IST
Last Updated 13 ಡಿಸೆಂಬರ್ 2016, 19:30 IST
ಲೆಕ್ಕಕ್ಕೆ ಸಿಗದ ಹಣದ ಲೆಕ್ಕ!
ಲೆಕ್ಕಕ್ಕೆ ಸಿಗದ ಹಣದ ಲೆಕ್ಕ!   

ಸೂಕ್ತ ತೆರಿಗೆ ಪಾವತಿಸದ ವ್ಯವಹಾರಗಳು ಮತ್ತು ಆದಾಯವನ್ನು ಲೆಕ್ಕಕ್ಕೆ ಸಿಗದ ಹಣ ಎಂದು ಪರಿಗಣಿಸಬಹುದು. ದೇಶದೊಳಗಿನ ಆರ್ಥಿಕ ಚಟುವಟಿಕೆಗಳಲ್ಲಿ ಈ ಹಣ ಯಾವ ಲೆಕ್ಕಾಚಾರದೊಳಗೂ ಸೇರುವುದಿಲ್ಲ. ಹೀಗಾಗಿಯೇ ಇದನ್ನು ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ವರದಿಯಾಗದ ವರಮಾನ ಎಂದೇ ಪರಿಗಣಿಸಲಾಗುತ್ತದೆ.

ಇದುವೇ ಕಪ್ಪುಹಣ. ಅಕ್ರಮ ಗಳಿಕೆ, ವರದಿಯಾಗದ ಹಣ, ದಾಖಲಾಗದ ದುಡ್ಡು ಮತ್ತು ಅನೌಪಚಾರಿಕ ಹಣಕಾಸನ್ನೆಲ್ಲ ಒಟ್ಟು ಸೇರಿಸಿ ಲೆಕ್ಕಕ್ಕೆ ಸಿಗದ ಹಣ ಎಂದು ಕರೆಯಬಹುದು. ಅಕ್ರಮ ದಾರಿಯಿಂದ ಗಳಿಸಿದ ಆದಾಯ ಎಂದರೆ,  ಕಾನೂನುಬದ್ಧ ಆದಾಯವನ್ನು ಸರ್ಕಾರಿ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದು ಎನ್ನಬೇಕು. ತೆರಿಗೆ ಸಲ್ಲಿಸದೆ ಇರುವುದು, ಇತರ ಕಾನೂನುಬದ್ಧ ಪಾವತಿ ಮಾಡದಿರುವುದು, ಕೈಗಾರಿಕೆ ಮತ್ತು ಇತರ ಕಾನೂನುಗಳನ್ನು ಪಾಲನೆ ಮಾಡದಿರುವುದರಿಂದ  ಲೆಕ್ಕಕ್ಕೆ ಸಿಗದ ಹಣ ಸಂಗ್ರಹವಾಗುತ್ತದೆ.

ರಿಯಲ್‌ ಎಸ್ಟೇಟ್‌, ಗಣಿಗಾರಿಕೆ, ಚಿನ್ನ, ಶಿಕ್ಷಣ, ಕೃಷಿ, ಲೆಕ್ಕ ತಪ್ಪಿಸಿ ವ್ಯಾಪಾರ, ಅಕ್ರಮ ಹಣಕಾಸು ವಿಧಾನಗಳು, ಹಣ ಲೇವಾದೇವಿ, ವಿವಿಧ ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳು, ಚುನಾವಣಾ ವೆಚ್ಚದಂತಹ ಹಲವು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನು ಸೇರಿಸಿಕೊಂಡು ಈ ಮಾಹಿತಿ ಕಲೆ ಹಾಕಲಾಗಿದೆ.

ಜಿಡಿಪಿಯಲ್ಲಿ ಲೆಕ್ಕಕ್ಕೆ ಸಿಗದ ಆದಾಯ
1980–81ರಿಂದೀಚೆಗೆ ಅಂದಾಜಿಸಿದಂತೆ ದೇಶದಲ್ಲಿ ಲೆಕ್ಕಕ್ಕೆ ಸಿಗದ ಹಣದ  ಸೃಷ್ಟಿಯಲ್ಲಿ ಸುಸ್ಥಿರ ಇಳಿಕೆ ಕಂಡುಬಂದಿದೆ. ಲೆಕ್ಕಕ್ಕೆ ಸಿಗದ ಹಣದ ಲೆಕ್ಕದ ಅಂದಾಜಿಗೆ ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಹಣದ ಅಂದಾಜು ಮಾಡುವ ಕುರಿತು ಒಮ್ಮತಾಭಿಪ್ರಾಯ ಕಂಡುಬಂದಿಲ್ಲ. 2009–10ರಲ್ಲಿ ಈ ಹಣದ ಮೊತ್ತ ಜಿಡಿಪಿಯ ಶೇ 25ರಿಂದ 75ರಷ್ಟು ಇರಬಹುದು ಎಂಬ ಅಂದಾಜು ಮಾಡಲಾಗಿದೆ.

ಲೆಕ್ಕಕ್ಕೆ ಸಿಗದ ಆದಾಯದ ಗಾತ್ರ
ಇಲ್ಲಿ ಮಾಡಿದ ಲೆಕ್ಕಾಚಾರದಂತೆ ಲೆಕ್ಕಕ್ಕೆ ಸಿಗದ ಆದಾಯವನ್ನು ಜಿಡಿಪಿಯ ಶೇ 40ರಷ್ಟು ಎಂದು ಅಂದಾಜಿಸಲಾಗಿದೆ.

ಕ್ಷೇತ್ರವಾರು ವಿಶ್ಲೇಷಣೆ
ರಿಯಲ್‌ ಎಸ್ಟೇಟ್‌

40 %: ಒಟ್ಟು ಕಪ್ಪುಹಣದಲ್ಲಿ ಪಾಲು
ದೇಶದ ಒಟ್ಟು ಲೆಕ್ಕಕ್ಕೆ ಸಿಗದ  ವರಮಾನದಲ್ಲಿ ಶೇ 40ರಷ್ಟು ವರಮಾನವು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ  ಹೂಡಿಕೆಯಾಗಿದೆ ಎಂದು ಕೇಂದ್ರೀಯ ಆರ್ಥಿಕ ಗುಪ್ತಚರ ಇಲಾಖೆ ಅಂದಾಜಿಸಿದೆ.

5–6 % ಜಿಡಿಪಿಯಲ್ಲಿ ರಿಯಲ್‌ ಎಸ್ಟೇಟ್‌ನ ಪಾಲು ₹ 2.68 ಲಕ್ಷ ಕೋಟಿಗಳಿಂದ ₹ 3 ಲಕ್ಷ ಕೋಟಿ ರಿಯಲ್‌ ಎಸ್ಟೇಟ್‌ನ ವಹಿವಾಟಿನ ಮೊತ್ತ

₹ 12 ಲಕ್ಷ ಕೋಟಿ 2020ರ ವೇಳೆಗೆ ತಲುಪಲಿರುವ ವಹಿವಾಟಿನ ಮೊತ್ತ ₹ 68,300 ಕೋಟಿ 2005–12ರ ನಡುವೆ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ರೂಪದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಆಕರ್ಷಿಸಿದ ಮೊತ್ತ

ರಿಯಲ್‌ ಎಸ್ಟೇಟ್ ಕ್ಷೇತ್ರದ ಪ್ರಮುಖ ಪಾತ್ರಧಾರಿಗಳು: ಡೆವಲಪರ್‌ಗಳು, ಬಿಲ್ಡರ್‌ಗಳು, ಗುತ್ತಿಗೆದಾರರು ಮತ್ತು  ಹೂಡಿಕೆದಾರರು

ಲೆಕ್ಕಕ್ಕೆ ಸಿಗದ ಹಣವನ್ನು  ಹೆಚ್ಚಾಗಿ ರಿಯಲ್‌ ಎಸ್ಟೇಟ್‌ ರಂಗದಲ್ಲಿ ತೊಡಗಿಸಲಾಗಿರುತ್ತದೆ ಎಂದು ಹಣಕಾಸು ಸಚಿವಾಲಯ 2012ರಲ್ಲಿ ಪ್ರಕಟಿಸಿದ್ದ ಕಪ್ಪು ಹಣದ ಮೇಲಿನ ಶ್ವೇತಪತ್ರದಲ್ಲಿ ತಿಳಿಸಿದೆ.

ಚರಾಸ್ತಿಗಳನ್ನು ಹೋಲಿಸಿ ನೋಡಲು ಸಾಧ್ಯವಾಗದೆ ಇರುವುದು ಮತ್ತು ಮೌಲ್ಯಮಾಪನ ಮಾಡುವುದರಲ್ಲಿ ಭಿನ್ನತೆ ಇರುವುದೇ ಇದಕ್ಕೆ ಕಾರಣ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ.

₹ 4 ಲಕ್ಷ ಕೋಟಿ: ದೇಶದಲ್ಲಿ 2010–11ನೇ ಸಾಲಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ತೊಡಗಿಸಲಾದ ಲೆಕ್ಕಕ್ಕೆ ಸಿಗದ ಹಣದ ಮೊತ್ತ. 78 % 2010ರಲ್ಲಿ  ದೆಹಲಿಯ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ತೊಡಗಿಸಲಾದ ಮೊತ್ತದಲ್ಲಿನ  ಲೆಕ್ಕಕ್ಕೆ ಸಿಗದ ವಹಿವಾಟಿನ ಮೌಲ್ಯ.

50 %: ಬೆಂಗಳೂರು ಮತ್ತು ಕೋಲ್ಕತ್ತದ ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿದ ಲೆಕ್ಕಕ್ಕೆ ಸಿಗದ ಹಣ  ರಿಯಲ್ ಎಸ್ಟೇಟ್‌ನಲ್ಲಿ ಭ್ರಷ್ಟಾಚಾರ ಭೂಮಿ ಸ್ವಾಧೀನ, ನೋಟಿಫಿಕೇಷನ್‌– ಡಿನೋಟಿಫಿಕೇಷನ್‌, ಅನುಮತಿ ಹಂತದಲ್ಲಿ ಅವ್ಯವಹಾರಗಳು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಭ್ರಷ್ಟಾಚಾರದ ಮೂಲಗಳಾಗಿವೆ.

ಶಿಕ್ಷಣ ಕ್ಷೇತ್ರ
₹ 48,400 ಕೋಟಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ಸೃಷ್ಟಿಯಾಗುವ ಲೆಕ್ಕಕ್ಕೆ ಸಿಗದ ಹಣದ ಮೊತ್ತ. ₹ 5,953 ಕೋಟಿ 2011ರಲ್ಲಿ  ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಂಗ್ರಹವಾದ ಕ್ಯಾಪಿಟೇಷನ್‌ ಶುಲ್ಕದ ಅಂದಾಜು.

ಅನುಮತಿ
ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಅನುಮತಿ ಪಡೆಯವ ಹಂತವೇ ಶಿಕ್ಷಣ ಕ್ಷೇತ್ರದಲ್ಲಿನ ಕಪ್ಪುಹಣದ ಬಲುದೊಡ್ಡ ಮೂಲ

ಚಿನ್ನ
18 ಸಾವಿರ ಟನ್‌:
‘ಇಂಡಿಯಾಸ್‌ ಫಟಲ್‌ ಅಟ್ರಾಕ್ಷನ್‌’ ಶಿರೋನಾಮೆಯ ಮ್ಯಾಕ್ವೇರ್‌ ಸಂಸ್ಥೆಯ ವರದಿಯ ಪ್ರಕಾರ, ಭಾರತೀಯರು ದಾಸ್ತಾನು ಮಾಡಿಟ್ಟಿರುವ ಚಿನ್ನದ ಪ್ರಮಾಣ.

₹ 64 ಲಕ್ಷ ಕೋಟಿ: ದಾಸ್ತಾನು ಇಟ್ಟಿರುವ 18 ಸಾವಿರ ಟನ್‌ ಚಿನ್ನದ ಮೌಲ್ಯ

ಶೇ 8ರಷ್ಟು: ಕೌಟುಂಬಿಕ ಉಳಿತಾಯ ಚಿನ್ನದ ರೂಪದಲ್ಲಿ ಸಂಗ್ರಹವಾಗಿರುವುದು.

ಜಗತ್ತಿನ ಶೇ 11ರಷ್ಟು ಜಗತ್ತಿನ ಅತಿದೊಡ್ಡ ಚಿನ್ನ ಬಳಕೆದಾರ ದೇಶ ಭಾರತ. ಜಗತ್ತಿನ ಶೇ 11ರಷ್ಟು ಚಿನ್ನ ನಮ್ಮಲ್ಲಿದೆ. ಲೆಕ್ಕಕ್ಕೆ ಸಿಗದ ಹಣವನ್ನು ಚಿನ್ನದ ರೂಪದಲ್ಲಿ ಸಂಗ್ರಹಿಸಿ ಇಡುವುದು ಬಹಳ ಸಾಮಾನ್ಯವಾಗಿದೆ.

ಚಿನ್ನದ ಆಮದು ಸುಂಕ ಹೆಚ್ಚಿದಂತೆಲ್ಲ ಕಳ್ಳದಾರಿಯಲ್ಲಿ ಚಿನ್ನ ಸಾಗಿಸುವ ಪ್ರಮಾಣವೂ ಅಧಿಕವಾಗುತ್ತದೆ. ಹವಾಲಾ ಮಾರುಕಟ್ಟೆಗೂ ಚಿನ್ನ ಒಂದು ಉತ್ತಮ ಸಾಧನ. ಚಿನ್ನದ ಮೇಲಿನ ಆಮದು ಸುಂಕ ಶೇ 400ರಷ್ಟು ಅಧಿಕಗೊಂಡಿದ್ದರೂ, ಚಿನ್ನದ ಬೇಡಿಕೆಯಲ್ಲಿ ಶೇ 25ರಷ್ಟು ಅಧಿಕವಾಗಿರುವುದು ದೇಶದ ಜನರ ಚಿನ್ನದ ಮೋಹಕ್ಕೆ ಸಾಕ್ಷಿಯಾಗಿದೆ.

ಗಣಿಗಾರಿಕೆ
₹ 27,800 ಕೋಟಿ:
ಗಣಿ ಕ್ಷೇತ್ರದಲ್ಲಿ ನಡೆಯುವ ಅಕ್ರಮದ ಪ್ರಮಾಣ. ಈ ಕ್ಷೇತ್ರವು ಜಿಡಿಪಿಗೆ ನೀಡುವ ಕೊಡುಗೆಯ ಪ್ರಮಾಣ ಶೇ 10.2ರಷ್ಟು.

ADVERTISEMENT

3 ಕೋಟಿ ಟನ್‌: 2011ರಲ್ಲಿ ಕರ್ನಾಟಕ ಲೋಕಾಯುಕ್ತ ಸಿದ್ಧಪಡಿಸಿದ ವರದಿಯಂತೆ 2006–10ರ ನಡುವೆ ರಫ್ತಾದ ಅಕ್ರಮ ಅದಿರಿನ ಪ್ರಮಾಣ. ಇದರ ಅಂದಾಜು ಮೌಲ್ಯ ₹ 12,228 ಕೋಟಿ

ಕೃಷಿ
₹ 50 ಸಾವಿರ ಕೋಟಿ:
ಅಂದಾಜಿನ ಪ್ರಕಾರ, 2007–08ರಲ್ಲಿ ಕೃಷಿ ಆದಾಯಕ್ಕೆ ತೆರಿಗೆ ವಿಧಿಸದೆ ಕೈತಪ್ಪಿದ ವರಮಾನದ ಪ್ರಮಾಣ. ಜಿಡಿಪಿಯಲ್ಲಿ ಇದರ ಪ್ರಮಾಣ ಶೇ 1.2ರಷ್ಟು.

₹ 2 ಸಾವಿರ ಲಕ್ಷ ಕೋಟಿ: ಆರ್‌ಟಿಐ ಮೂಲಕ ಪಡೆದ ಮಾಹಿತಿಯಂತೆ 2011ರಲ್ಲಿ 6.57 ಲಕ್ಷ ಮಂದಿ ಘೋಷಿಸಿದ ಕೃಷಿ ಆದಾಯದ ಪ್ರಮಾಣ. ಇದರ ಪ್ರಕಾರ ಒಬ್ಬ ವ್ಯಕ್ತಿಯ ಸರಾಸರಿ ಆದಾಯ ಪ್ರಮಾಣ ₹ 30 ಕೋಟಿ

12.3 %: 2009–10ರಲ್ಲಿ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ. ತೆರಿಗೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಏನಿದ್ದರೂ ಕೆಲವು ಉತ್ಪನ್ನಗಳಿಗೆ ನೀಡುವ ವ್ಯಾಟ್‌ ಮತ್ತು ಚಹಾ ತೋಟಗಳಿಗೆ ವಿಧಿಸುವ ಆದಾಯ ತೆರಿಗೆಯಂತಹ ತೆರಿಗೆಗಳ ಮೂಲಕ ಮಾತ್ರ

ಕೃಷಿ ಆದಾಯ ಎಂಬ ಪದವನ್ನು ಗರಿಷ್ಠ ಪ್ರಮಾಣದಲ್ಲಿ ದುರ್ಬಳಕೆ ಮಾಡಲಾಗಿದೆ. ಹೈಬ್ರಿಡ್‌ ಬೀಜ ಉತ್ಪಾದಿಸುವ ಬಹುರಾಷ್ಟ್ರೀಯ ಕಂಪೆನಿಗಳೂ ಇಂದು ಇದೇ ಆಧಾರದಲ್ಲಿ ತೆರಿಗೆ ವಿನಾಯಿತಿಗೆ ಪ್ರಯತ್ನ ನಡೆಸಿವೆ. ಒಂದು ಅಂದಾಜಿನ ಪ್ರಕಾಣ, 2009–10ರಲ್ಲಿ ಕೃಷಿ ಉತ್ಪನ್ನಗಳಿಗೆ ತೆರಿಗೆ ವಿಧಿಸದೆ ದೇಶ ಕಳೆದುಕೊಂಡ ತೆರಿಗೆಯ ಪ್ರಮಾಣ ₹  7.63 ಲಕ್ಷ ಕೋಟಿ ವ್ಯಾಪಾರದಲ್ಲಿ ತಪ್ಪು ಲೆಕ್ಕಾಚಾರ

₹ 1.9 ಲಕ್ಷ ಕೋಟಿ: 2010ರಲ್ಲಿ ಸರಿಯಾದ ಲೆಕ್ಕ ನೀಡದೆ ಮಾಡಲಾದ ವಂಚನೆಯ ಪ್ರಮಾಣ. 
₹ 18.6 ಲಕ್ಷ ಕೋಟಿ: 2010–13ರ ನಡುವೆ ವ್ಯಾಪಾರದ ಸರಿಯಾದ ಲೆಕ್ಕ ನೀಡದೆ ದೇಶದಿಂದ ಹೊರಹೋದ ಅಕ್ರಮ ಹಣದ ಪ್ರಮಾಣ

ಅಕ್ರಮ ಹಣಕಾಸು ರವಾನೆ
₹ 1.1 ಲಕ್ಷ ಕೋಟಿ: 2010ರಲ್ಲಿ ದೇಶದಿಂದ ಹೊರಹೋದ ಅಕ್ರಮ ಬಂಡವಾಳದ ಪ್ರಮಾಣ. 2007–09ರ ನಡುವೆ ಈ ಬಂಡವಾಳದ ಪ್ರಮಾಣ ಜಿಡಿಪಿಯ ಶೇ 6.78ರಿಂದ ಶೇ 0.9ರಷ್ಟಿದೆ. ಕಡಿಮೆ ದರ ನಮೂದಿಸಿ ವ್ಯಾಪಾರ, ಸಗಟು ನಗದು ರವಾನೆ, ಹವಾಲಾ ವ್ಯವಹಾರ, ಕಳ್ಳಸಾಗಣೆ.... ಅಕ್ರಮ ಹಣ ಸಾಗಣೆಯ ವಿವಿಧ ಮೂಲಗಳಾಗಿವೆ.

₹ 36 ಸಾವಿರ ಕೋಟಿ: 2010ರಲ್ಲಿ ಅನೌಪಚಾರಿಕ ಹವಾಲಾ ಮಾರುಕಟ್ಟೆ ಮೂಲಕ ಭಾರತದಿಂದ ಕುದುರಿದ ವಿದೇಶಿ ವಿನಿಮಯ ಪ್ರಮಾಣ

₹ 24.5 ಲಕ್ಷ ಕೋಟಿ: 1948ರಿಂದ 2010ರ ನಡುವೆ ಭಾರತದಿಂದ ಅಕ್ರಮವಾಗಿ ಹೊರಗೆ ಹೋದ ದುಡ್ಡಿನ ಪ್ರಮಾಣ. ಆದರೆ ರೌಂಡ್‌ ಟ್ರಿಪ್ಪಿಂಗ್ ರೂಪದಲ್ಲಿ ಈ ಮೊತ್ತದಲ್ಲಿ ಪ್ರಮುಖ ಭಾಗ ಭಾರತಕ್ಕೆ ವಾಪಸ್‌ ಬಂದಿದೆ.

ಹಣ ಲೇವಾದೇವಿ
₹ 18.86 ಲಕ್ಷ ಕೋಟಿ: ಕಳೆದ ಒಂದು ದಶಕದಲ್ಲಿ ಹಣ ಲೇವಾದೇವಿ ಮೂಲಕ ಭಾರತದಿಂದ ಹೊರ ಹೋದ ಹಣದ ಪ್ರಮಾಣ

₹ 2 ಲಕ್ಷ ಕೋಟಿ: ಬ್ಯಾಂಕ್‌ಗಳು, ತಿಳಿಯಿರಿ ನಿಮ್ಮ ಗ್ರಾಹಕರು (ಕೆವೈಸಿ) ನಿಯಮ ಪಾಲಿಸದಿರುವುದರಿಂದ ಬ್ಯಾಂಕ್‌ ಸಿಬ್ಬಂದಿಯ ನೆರವಿನಿಂದ ಕಪ್ಪು ಹಣ ಬಿಳಿಯಾದ ಮೊತ್ತ.
ಭ್ರಷ್ಟಾಚಾರ ಮತ್ತು ಲೆಕ್ಕಕ್ಕೆ ಸಿಗದ ವರಮಾನ

10–20 %: ಸರ್ಕಾರಿ ಅಧಿಕಾರಿಗಳೇ ಒಪ್ಪಿಕೊಂಡಿರುವಂತೆ ಸರ್ಕಾರಿ ಗುತ್ತಿಗೆಗಳಲ್ಲಿ ನಡೆಯುವ ಲಂಚದ ಪ್ರಮಾಣ. 2012ರಲ್ಲಿ ಸಿಬಿಐ ದಾಖಲಿಸಿದ 1,048 ಪ್ರಕರಣಗಳ ಪೈಕಿ ಶೇ 75ರಷ್ಟು ಪ್ರಕರಣಗಳು ಸರ್ಕಾರಿ ಅಧಿಕಾರಿಗಳು ಲಂಚ ಪಡೆದ ಪ್ರಕರಣಗಳಾಗಿದ್ದವು.

ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ
₹ 3,600 ಕೋಟಿ:
ಅಗಸ್ಟಾ ವೆಸ್ಟ್‌ಲ್ಯಾಂಡ್ ವ್ಯವಹಾರದಲ್ಲಿ ಸರ್ಕಾರಿ ಮತ್ತು ವಾಯುಪಡೆ ಅಧಿಕಾರಿಗಳಿಗೆ ನೀಡಲಾದ ಲಂಚ ಟ್ರಾನ್‌್ಸಫರೆನ್ಸಿ ಇಂಟರ್‌ನ್ಯಾಷನಲ್‌ ಪ್ರಕಾರ, ರಕ್ಷಣಾ ಸಾಮಗ್ರಿ ಖರೀದಿ ವಿಚಾರದಲ್ಲಿ ಭಾರತ ಅತ್ಯಂತ ಅಪಾಯಕಾರಿ ವಲಯದಲ್ಲಿದೆ. ಭಾರತಕ್ಕೆ ಅದು ನೀಡಿದ ರೇಟಿಂಗ್‌ ‘ಡಿ’.

ಚುನಾವಣಾ ನಿಧಿ
75%: ಚುನಾವಣೆಯಲ್ಲಿ ಬಳಕೆಯಾಗುವ ಲೆಕ್ಕಕ್ಕೆ ಸಿಗದ ಹಣದ ಪ್ರಮಾಣ 2001ರಲ್ಲಿ ಸಮಿತಿಯೊಂದು ಕಂಡುಕೊಂಡಿರುವಂತೆ, ಅಭ್ಯರ್ಥಿಯೊಬ್ಬ ಪ್ರಚಾರಕ್ಕಾಗಿ ಮಿತಿಗಿಂತ 20 ಪಟ್ಟು ಅಧಿಕ ಖರ್ಚು ಮಾಡಿದ್ದ. ನೀರಾವರಿ, ರಸ್ತೆ, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಯೋಜನೆಗಳು ಅಕ್ರಮಗಳು ನಡೆಯುವ ಇತರ ಪ್ರಮುಖ ತಾಣಗಳು

ವರದಿ ಸಿದ್ಧಪಡಿಸಿದವರು: ಅನುಪಮ್‌ ಮನೂರ್‌, ಮಾನಸ ವೆಂಕಟರಾಮನ್‌ (ತಕ್ಷಶಿಲಾ ಇನ್‌ಸ್ಟಿಟ್ಯೂಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.