ADVERTISEMENT

ಲೇಲೆಕ್ಸಸ್‌ಗೆ ರೂ150 ಕೋಟಿ: ಹೆಬ್ರಾನ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ನಗರದ ಹೆಬ್ರಾನ್‌ ಪ್ರಾಪ ರ್ಟೀಸ್‌ ಲಿ., ತನ್ನ ಐದನೇ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಯೋಜನೆ ‘ಲೇ ಲೆಕ್ಸಸ್‌ ಸ್ಟೋನ್ ವ್ಯೂ’ಗೆ ಚಾಲನೆ ನೀಡಿದೆ.

ಇಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆ­ಸಿದ ಹೆಬ್ರಾನ್‌ ಪ್ರಾಪರ್ಟೀಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀನಂದ್‌ ಪ್ರೇಮಚಂದ್ರನ್‌, ಉತ್ತರ ಬೆಂಗಳೂರಿನ ದೇವನಹಳ್ಳಿ ಪ್ರದೇಶದಲ್ಲಿ ರೂ150 ಕೋಟಿ ವೆಚ್ಚದಲ್ಲಿ ಐಶಾರಾಮಿ  ವಸತಿ ಯೋಜನೆ ಆರಂಭಿಸಲಾಗಿದೆ. 20 ಎಕರೆ ವಿಸ್ತಾರದಲ್ಲಿ 30 ವಿಲ್ಲಾಗಳು,172 ವಿಲ್ಲಾ ನಿವೇಶನಗಳನ್ನು ಅಭಿವೃದ್ಧಿ­ಪಡಿಸ­ಲಾಗುತ್ತಿದೆ. ಯೋಜನೆ 2016ರ ಡಿಸೆಂ­ಬ­ರ್‌ಗೆ ಪೂರ್ಣಗೊಳ್ಳಲಿದೆ ಎಂದ­ರು.

2100 ಚದರಡಿ ವಿಸ್ತಾರದ, ಮೂರು ಕೊಠಡಿಗಳ ವಿಲ್ಲಾಗೆ ರೂ98 ಲಕ್ಷ ಹಾಗೂ 2450 ಚದರಡಿ ವಿಸ್ತಾರ, 4 ಕೊಠಡಿಗಳ ವಿಲ್ಲಾಗೆ ರೂ1.20 ಕೋಟಿ ಬೆಲೆ ನಿಗದಿಪಡಿಸಲಾಗಿದೆ. ನಿವೇಶನಗಳು ಚದರಡಿಗೆ ರೂ2799ರಂತೆ ಲಭ್ಯವಿವೆ. ‘ಎ’ ಖಾತಾ ಮಾಡಿಕೊಡಲಾಗುತ್ತದೆ ಎಂದು ಕಂಪೆನಿಯ ಸಿಎಫ್‌ಒ ಸೋಮನ್‌ ನಂಬಿಯಾರ್‌ ವಿವರಿಸಿದರು.

ಕಂಪೆನಿ ಕೆ.ಆರ್.ಪುರ ಬಡಾವಣೆ ಯಲ್ಲಿ ನಿರ್ಮಿಸಿದ ಐಶಾರಾಮಿ ವಸತಿ ಸಂಕೀರ್ಣ ಹೆಬ್ರಾನ್‌ ಎನ್‌ಕ್ಲೇವ್‌ಗೆ ಕ್ರಿಸಿಲ್‌ನಿಂದ 5ಸ್ಟಾರ್‌ ರೇಟಿಂಗ್‌ ಸಿಕ್ಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.