ADVERTISEMENT

ವಿತ್ತೀಯ ಕೊರತೆ ಪ್ರಮಾಣ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ವಿತ್ತೀಯ ಕೊರತೆ ಪ್ರಮಾಣ ಹೆಚ್ಚಳ
ವಿತ್ತೀಯ ಕೊರತೆ ಪ್ರಮಾಣ ಹೆಚ್ಚಳ   

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌– ಜೂನ್‌) ವಿತ್ತೀಯ ಕೊರತೆಯು ಬಜೆಟ್‌ ಅಂದಾಜಿನ ಶೇ 61ರಷ್ಟಾಗಿದೆ. ಮೊತ್ತದ ಲೆಕ್ಕದಲ್ಲಿ ₹3.26 ಲಕ್ಷ ಕೋಟಿಗಳಷ್ಟಿದೆ. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ  ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ 51.6ರಷ್ಟಿತ್ತು.

ವೆಚ್ಚದ ಪ್ರಮಾಣವು ಗರಿಷ್ಠ ಮಟ್ಟದಲ್ಲಿರುವುದು ಮತ್ತು ತೆರಿಗೆಯೇತರ ವರಮಾನ ಸಂಗ್ರಹ ತಗ್ಗಿರುವುದೇ ವಿತ್ತೀಯ ಕೊರತೆ ಏರಿಕೆಯಾಗಲು ಕಾರಣ ಎಂದು ಸರ್ಕಾರ ತಿಳಿಸಿದೆ. ವೆಚ್ಚ ಮತ್ತು ವರಮಾನದ ನಡುವಿನ ಅಂತರದ ಮೇಲೆ ವಿತ್ತೀಯ ಕೊರತೆಯನ್ನು ಲೆಕ್ಕ ಹಾಕಲಾಗುತ್ತದೆ.

ತೆರಿಗೆ ವರಮಾನವು ಬಜೆಟ್‌ ಅಂದಾಜಿನ ಶೇ 14.9ರಷ್ಟು ಅಂದರೆ ₹1.57 ಲಕ್ಷ ಕೋಟಿಗಳಷ್ಟಿದೆ. ತೆರಿಗೆಯೇತರ ವರಮಾನವು ಶೇ 17.8 ರಿಂದ ಶೇ 7.3ಕ್ಕೆ ತಗ್ಗಿದ್ದು, ₹23,484 ಕೋಟಿಗಳಷ್ಟಾಗಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ  ವಿತ್ತೀಯ ಕೊರತೆಯು ₹5.33 ಲಕ್ಷ ಕೋಟಿಗಳಷ್ಟಿರಲಿದೆ (ಜಿಡಿಪಿಯಲ್ಲಿ ಶೇ 3.6ರಷ್ಟು) ಎಂದು ಅಂದಾಜಿಸಲಾಗಿದೆ.
ಬಜೆಟ್‌ ಅಂದಾಜಿನಂತೆಯೇ 2015–16ರಲ್ಲಿ ಶೇ 3.9ರಷ್ಟು ವಿತ್ತೀಯ ಕೊರತೆ  ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.