ADVERTISEMENT

ವೊಡಾಫೋನ್‌: ಡೇಟಾ ಪ್ರಚಾರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ಮೇ 2017, 19:30 IST
Last Updated 13 ಮೇ 2017, 19:30 IST

ಬೆಂಗಳೂರು:  ಮೊಬೈಲ್‌ ಸೇವಾ ಸಂಸ್ಥೆ ವೊಡಾಫೋನ್‌, ರಾಜ್ಯದಲ್ಲಿ ತನ್ನ ಡೇಟಾ ಬಳಕೆದಾರರ ಸಂಖ್ಯೆ ಹೆಚ್ಚಿಸಲು ವಿಶೇಷ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಮೊಬೈಲ್‌ ಬಳಕೆದಾರರಿಗೆ ತ್ವರಿತ, ನಿರಂತರ, ವಿಶ್ವಾಸಾರ್ಹ, ಗುಣಮಟ್ಟ ಮತ್ತು ವಿಶ್ವಾಸಾರ್ಹ  ಸಂಪರ್ಕ ಜಾಲ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ.  ಕ್ರೀಡಾಪಟುಗಳಾದ ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌ ಮತ್ತು ಪ್ರಕಾಶ್‌ ಪಡುಕೋಣೆ ಅವರು, ‘ವೊಡಾಫೋನ್‌ ಸೂಪರ್‌ನೆಟ್‌ 4ಜಿ ನನ್ನ  ಮೊದಲ ಆಯ್ಕೆಯಾಗಿದೆ’ ಎನ್ನುವ ಪ್ರಚಾರಕ್ಕೆ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT