ADVERTISEMENT

ವೋಲ್ವೊ ಕಾರು ಘಟಕ

ಹೊಸಕೋಟೆಯ ಘಟಕದಲ್ಲಿ ಜೋಡಣಾ ಕೇಂದ್ರ

​ಪ್ರಜಾವಾಣಿ ವಾರ್ತೆ
Published 18 ಮೇ 2017, 18:49 IST
Last Updated 18 ಮೇ 2017, 18:49 IST
ಟಾಮ್‌ ವಾನ್‌ ಬಾನ್ಸ್‌ಡಾಫ್‌
ಟಾಮ್‌ ವಾನ್‌ ಬಾನ್ಸ್‌ಡಾಫ್‌   

ಬೆಂಗಳೂರು: ದುಬಾರಿ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಕಂಪೆನಿ ವೋಲ್ವೊ, ಈ ವರ್ಷಾಂತ್ಯದ ವೇಳೆಗೆ ಬೆಂಗಳೂರು ಬಳಿ ಕಾರು ಜೋಡಣಾ ಘಟಕ ಸ್ಥಾಪಿಸಲಿದೆ. 

ಹೊಸಕೋಟೆ ಸಮೀಪದಲ್ಲಿರುವ ವೋಲ್ವೊ ಟ್ರಕ್‌ ಮತ್ತು ಬಸ್‌ ತಯಾರಿಕಾ ಕಾರ್ಖಾನೆಯ ಆವರಣದಲ್ಲಿಯೇ ಕಾರು ಜೋಡಣಾ ಘಟಕ ಕಾರ್ಯಾರಂಭ ಮಾಡಲಿದೆ. ಇದು ವೋಲ್ವೊ ಕಾರು ತಯಾರಿಕಾ ಕಂಪೆನಿಯ ಮೊದಲ ಜೋಡಣಾ ಘಟಕ ಎಂಬ ಹೆಗ್ಗಳಿಕೆ ಹೊಂದಲಿದೆ.
ಇಲ್ಲಿಯವರೆಗೆ ಸ್ವೀಡನ್‌ ಮತ್ತು ಬೆಲ್ಜಿಯಂ ಘಟಕಗಳಲ್ಲಿ ತಯಾರಾದ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲಾಗುತ್ತಿತ್ತು.

ಇನ್ನು ಮುಂದೆ ಈ ಎರಡು ಘಟಕಗಳಿಂದ ಬಿಡಿಭಾಗಗಳನ್ನು ಮಾತ್ರ ಆಮದು ಮಾಡಿಕೊಂಡು ಹೊಸಕೋಟೆ ಘಟಕದಲ್ಲಿ ಕಾರು ಜೋಡಣೆ
ಮಾಡಲಾಗುತ್ತದೆ. 

ADVERTISEMENT

‘2017ರ ಅಂತ್ಯಕ್ಕೆ ಈ ಘಟಕದಲ್ಲಿ ಸಿದ್ಧವಾಗಲಿರುವ ಎಕ್ಸ್‌ಸಿ 90 ವಿಲಾಸಿ ವೋಲ್ವೊ ‘ಎಸ್‌ಯುವಿ’ಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿವೆ’ ಎಂದು ವೋಲ್ವೊ ಆಟೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಟಾಮ್‌ ವಾನ್‌ ಬಾನ್ಸ್‌ಡಾಫ್‌  ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಹೊಸಕೋಟೆ ವೋಲ್ವೊ ಕಾರ್ಖಾನೆಯಲ್ಲಿರುವ ಮೂಲಸೌಲಭ್ಯಗಳನ್ನೇ ಬಳಸಿಕೊಳ್ಳುವುದಾಗಿ ಹೇಳಿದ ಅವರು, ಹೂಡಿಕೆಯ ಬಗ್ಗೆ ಮಾಹಿತಿ ನೀಡಲಿಲ್ಲ.

‘ವೋಲ್ವೊ ವಿಲಾಸಿ ಕಾರುಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ವರ್ಷಾಂತ್ಯಕ್ಕೆ ಮೂರು ಹೊಸ ವಿಲಾಸಿ ಕಾರು ಮಾರುಕಟ್ಟೆಗೆ ಪ್ರವೇಶಿಸಲಿವೆ’  ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.