ADVERTISEMENT

ಶೇ 95 ರಷ್ಟು ಅದಿರು ಸಂಸ್ಕರಣೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 19:41 IST
Last Updated 28 ಏಪ್ರಿಲ್ 2017, 19:41 IST

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ‘ಹಟ್ಟಿ ಚಿನ್ನದ ಗಣಿ ಕಂಪೆನಿ 2016–17ನೇ ಸಾಲಿನಲ್ಲಿ ಅದಿರು ಸಂಸ್ಕರಣೆಯಲ್ಲಿ ಶೇ 95ರಷ್ಟು ಗುರಿ ತಲುಪಿದೆ’ ಎಂದು ಕಂಪೆನಿ ಅಧ್ಯಕ್ಷ ಬಿ.ಆರ್‌. ಯಾವಗಲ್‌ ಅವರು ಹೇಳಿದ್ದಾರೆ.

‘ಗಣಿಯು 6 ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಸಂಸ್ಕರಿಸುವ ಗುರಿ ಹೊಂದಿತ್ತು. 5.59 ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಸಂಸ್ಕರಿಸಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಸಾಲಿನಲ್ಲಿ 1,590 ಕೆ.ಜಿ ಚಿನ್ನ ಉತ್ಪಾದಿಸುವ ಗುರಿಯನ್ನು ಕಂಪೆನಿ ಹೊಂದಿತ್ತು. ಆದರೆ, 1,579 ಕೆ.ಜಿ ಉತ್ಪಾದಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.