ADVERTISEMENT

ಷೇರುಪೇಟೆ ಮೇಲೆ ಸೇವಾ ವಲಯದ ಪ್ರಗತಿ ಪ್ರಭಾವ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2017, 19:30 IST
Last Updated 26 ಫೆಬ್ರುವರಿ 2017, 19:30 IST
ನವದೆಹಲಿ (ಪಿಟಿಐ): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಕ್ರಿಯೆಯು  ಈ ವಾರದ ಷೇರುಪೇಟೆ ವಹಿವಾಟು ನಿರ್ಧರಿಸುವ ಪ್ರಮುಖ ವಿದ್ಯಮಾನಗಳಲ್ಲಿ ಒಂದಾಗಿದೆ.  
 
ಇದನ್ನು ಹೊರತುಪಡಿಸಿದರೆ ತಯಾರಿಕಾ ಮತ್ತು ಸೇವಾ ವಲಯದ  ಪ್ರಗತಿಗೆ ಸಂಬಂಧಿಸಿದ ಪಿಎಂಐ ವರದಿ  ಮತ್ತು ವಾಹನ ತಯಾರಿಕಾ ಮತ್ತು ಮಾರಾಟ ವಲಯದ ಅಂಕಿ, ಅಂಶಗಳು ಷೇರುಪೇಟೆಯ ಮೇಲೆ ಪ್ರಭಾವ ಬೀರಲಿವೆ. 
 
ಈ ಮೂರು ಬೆಳವಣಿಗೆಗಳನ್ನು ಹೊರತುಪಡಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಹತ್ವದ ಘಟನೆಗಳೇನೂ ಕಾಣುತ್ತಿಲ್ಲ. 
 
ಹೂಡಿಕೆದಾರರು, ವರ್ತಕರು, ಷೇರು ವಹಿವಾಟುದಾರರು ಉತ್ತರ ಪ್ರದೇಶದಲ್ಲಿನ ವಿವಿಧ ಹಂತದ ಮತದಾನವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಫಲಿತಾಂಶವು ಉತ್ತರ ಪ್ರದೇಶದ ಮತದಾನದ ಮೇಲೆ ಪ್ರಭಾವ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.
 
ಹೀಗಾಗಿ ವಿಧಾನಸಭಾ ಚುನಾವಣಾ ಫಲಿತಾಂಶವು ಷೇರುಪೇಟೆಯ ದಿಕ್ಕನ್ನು ಬದಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮಾರುಕಟ್ಟೆ ಮತ್ತು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 
 
ವಿವಿಧ ವಾಹನ ತಯಾರಿಕಾ ಕಂಪೆನಿಗಳ ಫೆಬ್ರುವರಿ ತಿಂಗಳ ವಾಹನ ಮಾರಾಟ ಅಂಕಿ, ಅಂಶಗಳು ಬುಧವಾರದಿಂದ  ಬಿಡುಗಡೆಯಾಗಲಿದ್ದು, ಅದು ಕೂಡ ವಹಿವಾಟಿನ ಗತಿ ನಿರ್ಧರಿಸಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.