ADVERTISEMENT

ಷೇರುಪೇಟೆ ಸೂಚ್ಯಂಕ 310 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST
ಷೇರುಪೇಟೆ ಸೂಚ್ಯಂಕ 310 ಅಂಶ ಏರಿಕೆ
ಷೇರುಪೇಟೆ ಸೂಚ್ಯಂಕ 310 ಅಂಶ ಏರಿಕೆ   

ನವದೆಹಲಿ (ಪಿಟಿಐ):  ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಉತ್ತಮ ವಾ ಗಿರುವ ನಿರೀಕ್ಷೆಯಿಂದಾಗಿ ಷೇರು-ಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ  ಚಟುವಟಿಕೆ   ಹೆಚ್ಚಿರು­ವು­-ದರಿಂದ   ಸಂವೇದಿ ಸೂಚ್ಯಂಕ ಮಂಗಳವಾರ 310 ಅಂಶ ಗಳಷ್ಟು  ಏರಿಕೆ ಕಂಡಿದೆ. ದಿನದ ವಹಿ ವಾಟು 26,025.80 ಅಂಶಗಳಲ್ಲಿ  ಮುಕ್ತಾಯವಾಗಿದೆ.

ಸತತ ಆರನೇ ವಹಿವಾಟು ದಿನವೂ  ಸಂವೇದಿ ಸೂಚ್ಯಂಕ ಏರಿಕೆ ದಾಖ ಲಿಸಿದೆ. ಸೂಚ್ಯಂಕವು 26 ಸಾವಿರ ಅಂಶಗಳ ಗಡಿ ದಾಟುತ್ತಿರುವುದು ಷೇರುಪೇಟೆ ಇತಿಹಾಸದಲ್ಲೇ ಇದು ಎರಡನೇ ಬಾರಿಯಾಗಿದೆ.  ಈ ಮೊದಲು ಜುಲೈ 7 ರಂದು ಸಂವೇದಿ ಸೂಚ್ಯಂಕ 26,100.08 ಅಂಶಗಳಷ್ಟು ಗರಿಷ್ಟ ಮಟ್ಟ ತಲುಪಿತ್ತು.

ಆರು  ವಹಿ­ವಾಟು ದಿನಗಳ ಅವಧಿ ಯಲ್ಲಿ ಸೂಚ್ಯಂಕ 1,018 ಅಂಶ ಗಳಷ್ಟು ಗಳಿಕೆ ಕಂಡಿದೆ. 30 ಷೇರುಗಳ ಪೈಕಿ ಭಾರ್ತಿ ಏರ್‌ಟೆಲ್‌   ಶೇ 5ರಷ್ಟು ಉತ್ತಮ ಗಳಿಕೆ ಕಂಡಿದೆ. ಉಳಿದಂತೆ ರಿಲಯನ್ಸ್‌, ಎಚ್‌ಡಿಎಫ್‌ಸಿ ಮತ್ತು ಟಸಿಎಸ್‌ ನಿರೀಕ್ಷೆಗಿಂತ ಹೆಚ್ಚಿನ ಗಳಿಕೆ ಕಂಡಿವೆ.

ಇನ್ನೊಂದೆಡೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್‌ಇ) ‘ನಿಫ್ಟಿ‘ 83.65 ಅಂಶಗಳ ಏರಿಕೆ ಕಂಡಿದ್ದು, 7,767.85 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯವಾಯಿತು.ಮುಂಗಾರಿನ ಚೇತರಿಕೆ ಮತ್ತು ಸಕಾರಾತ್ಮಕ ಜಾಗತಿಕ ಅಂಶಗಳು ದೇಶದ ಷೇರುಪೇಟೆಯ ಮೇಲೆ ಪ್ರಭಾವ ಬೀರಿವೆ ಎಂದು ದಳ್ಳಾಳ್ಳಿಗಳು ವಿಶ್ಲೇಷಿಸಿದ್ದಾರೆ.

ಚಿನ್ನ ₨225, ಬೆಳ್ಳಿ ₨335 ಕುಸಿತ
ಚಿನ್ನಾಭರಣ ವರ್ತಕರು ಮತ್ತು ಹೂಡಿಕೆದಾರರು ತಮ್ಮಲ್ಲಿದ್ದ ಸಂಗ್ರಹ ಮಾರಾಟ ಮಾಡಲು  ಮುಂದಾಗಿ­ದ್ದರಿಂದ ಮುಂಬೈ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಧಾರಣೆ ಕುಸಿತ ಕಂಡಿದೆ.ಚಿನ್ನದ ಧಾರಣೆ ಪ್ರತಿ 10 ಗ್ರಾಂಗಳಿಗೆ ₨225 ಕುಸಿತ ಕಂಡಿದ್ದು, ಸೋಮವಾರ ₨28,185ರಷ್ಟಿದ್ದ ಬೆಲೆ ₨27,960 ರಂತೆ ಮಂಗಳವಾರ ಮಾರಾಟವಾಗಿದೆ.

ಅಪರಂಜಿ ಚಿನ್ನ 10 ಗ್ರಾಂಗಳಿಗೆ
₨ 28,110ರಂತೆ ದಿನದ ವಹಿವಾಟು ಮುಗಿಸಿದೆ. ಸೋಮವಾರದ ಅಂತ್ಯಕ್ಕೆ  ಅಪರಂಜಿ  ಚಿನ್ನದ ಬೆಲೆ ₨ 28,335ರಷ್ಟಿತ್ತು.  ಬೆಳ್ಳಿ ₨335ರಷ್ಟು ಕುಸಿತ ಕಂಡಿದ್ದು, ಪ್ರತಿ ಕೆ.ಜಿಗೆ ₨45,535ರಂತೆ ಮಾರಾಟವಾಗಿದೆ. ಸೋಮವಾರದ ಧಾರಣೆ ₨45,870ರಷ್ಟಿತ್ತು. ಒಂದು ತಿಂಗಳಿನಿಂದ  ಡಾಲರ್‌ ಎದುರು ಇಳಿಮುಖವಾಗಿದ್ದ  ರೂಪಾಯಿ ಮೌಲ್ಯ ಮಂಗಳವಾರ 6 ಪೈಸೆಯಷ್ಟು ದಿಢೀರ್‌ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.