ADVERTISEMENT

ಸೂಚ್ಯಂಕ 424 ಅಂಶ ಏರಿಕೆ

ಪಿಟಿಐ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
ಸೂಚ್ಯಂಕ 424 ಅಂಶ ಏರಿಕೆ
ಸೂಚ್ಯಂಕ 424 ಅಂಶ ಏರಿಕೆ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಐದನೇ ವಾರವೂ ಉತ್ತಮ ವಹಿವಾಟು ನಡೆಯಿತು. ಐದು ತಿಂಗಳಿಗೂ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡುಕೊಂಡಿವೆ.

ಫೆಬ್ರುವರಿ 24ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶಿ ಮಟ್ಟದಲ್ಲಿ ನಡೆದ ಹಲವು ವಿದ್ಯಮಾನಗಳು ಷೇರುಪೇಟೆ ಗಳಲ್ಲಿ ಸೂಚ್ಯಂಕದ ಏರಿಕೆಗೆ ನೆರವಾದವು.

ಮುಂಬೈ ಷೇರುಪೆಟೆ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 424 ಅಂಶ ಏರಿಕೆ ಕಂಡು, 28,893 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.  ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 118 ಅಂಶ ಹೆಚ್ಚಾಗಿ, 8,939 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT


ಟಿಸಿಎಸ್‌ ಷೇರು ಮರು ಖರೀದಿ: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಕಂಪೆನಿ ತನ್ನ ಬಳಿಯಲ್ಲಿ ಇರುವ ಹೆಚ್ಚುವರಿ ನಗದನ್ನು ಷೇರುದಾರರಿಗೆ ವಿತರಿಸಲು₹16 ಸಾವಿರ ಕೋಟಿ ಮೊತ್ತದ ಷೇರುಗಳನ್ನು ಮರಳಿ ಖರೀದಿಸುವುದಾಗಿ ಪ್ರಕಟಿಸಿದೆ. ಇದು ಪೇಟೆಯಲ್ಲಿ ಉತ್ತಮ ಖರೀದಿ ವಹಿವಾಟಿಗೆ ಕಾರಣವಾಯಿತು.

ಜಿಯೊ ಸೃಷ್ಟಿಸಿದ ಆತಂಕ:  ರಿಲಯನ್ಸ್‌ ಜಿಯೊ,   ಏಪ್ರಿಲ್‌ 1 ರಿಂದ ಕೆಲವು ಹೊಸ ಕೊಡುಗೆಗಳನ್ನು ಘೋಷಿಸಿದೆ.  ಇದು ಷೇರುಪೇಟೆಯಲ್ಲಿ ಕೆಲಕಾಲ ಮಾರಾಟದ ಒತ್ತಡವನ್ನೂ ಸೃಷ್ಟಿಸಿತ್ತು.

ಐಡಿಯಾ-ವೊಡಾಫೋನ್  ವಿಲೀನ? ಜಿಯೊಗೆ ಪೈಪೋಟಿ ನೀಡಲು ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜರಾದ ವೊಡಾಫೋನ್ ಕಂಪೆನಿ ಭಾರತದ ಐಡಿಯಾ ಕಂಪೆನಿ ಜತೆ ವಿಲೀನವಾಗಲು ತೀರ್ಮಾನಿಸಿದ್ದು, ಇದಕ್ಕಾಗಿ ಉಭಯ ಕಂಪೆನಿಗಳು ಮಾತುಕತೆ ನಡೆಸಿವೆ.

ಈ ಸುದ್ದಿಯಿಂದ ಟೆಲಿಕಾಂ ಕಂಪೆನಿ ಗಳ ಷೇರುಗಳಲ್ಲಿ ಏರಿಕೆ ಕಾಣುವಂತಾಗಿ ಷೇರುಪೇಟೆ ವಹಿವಾಟು ಏರಿಕೆ ಕಾಣಲು ನೆರವಾಗಿವೆ.

ಏರ್‌ಟೆಲ್‌ ಸ್ವಾಧೀನಕ್ಕೆ ಟೆಲೆನಾರ್‌ ಇಂಡಿಯಾ: ಜಿಯೊ ನೀಡುತ್ತಿರುವ ಹೊಸ ಕೊಡುಗೆಗಳಿಂದ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ  ಭಾರ್ತಿ ಏರ್‌ಟೆಲ್‌ ಒತ್ತಡದಲ್ಲಿ ಸಿಲುಕಿದೆ. ತನ್ನ ಸಾಮರ್ಥ್ಯ  ಹೆಚ್ಚಿಸಿಕೊಳ್ಳಲು ನಾರ್ವೆ ಮೂಲದ ಟೆಲೆನಾರ್ ಟೆಲಿಕಮ್ಯುನಿಕೇಶನ್ಸ್‌ ಕಂಪೆನಿಯ ಭಾರತದ ವಹಿವಾಟನ್ನು ಸ್ವಾಧೀನಕ್ಕೆ ಪಡೆದಿದೆ.

ವಾರದ ವಹಿವಾಟು
* ₹1,310ಕೋಟಿ ದೇಶಿ, ವಿದೇಶಿ ಹೂಡಿಕೆದಾರರು ಖರೀದಿಸಿರುವ ಷೇರುಗಳ ಮೌಲ್ಯ
* ₹13ಸಾವಿರ ಕೋಟಿ ಬಿಎಸ್‌ಇ ವಾರದ ವಹಿವಾಟು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.