ADVERTISEMENT

‘ಸ್ಟಾರ್ಟ್‌ಅಪ್ ಇಂಡಿಯಾ’ ಬೆಳಕಿಂಡಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2016, 19:30 IST
Last Updated 8 ನವೆಂಬರ್ 2016, 19:30 IST
ಸ್ಟಾರ್ಟ್‌ಅಪ್‌ ಇಂಡಿಯಾ’
ಸ್ಟಾರ್ಟ್‌ಅಪ್‌ ಇಂಡಿಯಾ’   

ದೇಶದಲ್ಲಿ ನವೋದ್ಯಮಿಗಳಿಗೆ ಉತ್ತೇಜನ ನೀಡುವ ಮೂಲಕ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸ್ಟಾರ್ಟ್‌ಅಪ್‌ ಇಂಡಿಯಾ’ ಹೆಸರಿನ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ತಂದಿದೆ. 2016ರ ಜನವರಿ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಟಾರ್ಟ್‌ಅಪ್‌ ಇಂಡಿಯಾ’ಕ್ಕೆ ಚಾಲನೆ ನೀಡಿದ್ದಾರೆ.

ಮಹಾನಗರಗಳಷ್ಟೇ ಅಲ್ಲದೆ, ನಗರಗಳು, ಗ್ರಾಮೀಣ ಪ್ರದೇಶಗಳಲ್ಲಿಯೂ ಹೊಸ ಉದ್ಯಮಿಗಳನ್ನು ಸೃಷ್ಟಿಸುವುದು ಇದರ ಮೂಲ ಉದ್ದೇಶ. ಮುಖ್ಯವಾಗಿ ಹಿಂದುಳಿದ ವರ್ಗ (ಎಸ್‌ಸಿ ಮತ್ತು ಎಸ್‌ಟಿ) ಮತ್ತು ಮಹಿಳಾ ಉದ್ಯೋಗಿಗಳಿಗೆ ಉತ್ತೇಜನ ನೀಡುವುದಾಗಿದೆ.

ಕಾರ್ಯತಂತ್ರಗಳು
ಇದಕ್ಕಾಗಿ ಕೈಗಾರಿಕಾ ನೀತಿ ಮತ್ತು ಉತ್ತೇಜನ ಮಂಡಳಿ (ಡಿಐಪಿಪಿ) 19 ಕಾರ್ಯತಂತ್ರಗಳನ್ನು ಸಿದ್ಧಪಡಿಸಿದೆ. ಹೊಸ ಉದ್ಯಮ ಸ್ಥಾಪನೆ ಸರಳಗೊಳಿಸುವುದು, ಹಣಕಾಸು ನೆರವು, ಕೈಗಾರಿಕೆ–ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವ ಹೀಗೆ ಇನ್ನೂ ಹಲವು ಕಾರ್ಯಸೂತ್ರಗಳಿವೆ.

ADVERTISEMENT

ನವೋದ್ಯಮ ನಷ್ಟದಲ್ಲಿಲ್ಲ
ಅಮೆರಿಕ, ಬ್ರಿಟನ್‌ ನಂತರ ಭಾರತ ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2020ರ ವೇಳೆಗೆ ನವೋದ್ಯಮಗಳ ಸಂಖ್ಯೆ ದುಪ್ಪಟ್ಟಾಗಲಿದೆ ಎಂದು  ನಾಸ್ಕಾಂ– ಜಿನೋವ್‌ ಜಂಟಿ ವರದಿ ಹೇಳಿದೆ.

ತೆರಿಗೆ ವಿನಾಯ್ತಿ
ನವೋದ್ಯಮ ಸ್ಥಾಪನೆ  ಉತ್ತೇಜಿಸಲು ಕೇಂದ್ರ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 56 (2) (viib) ಅಡಿಯಲ್ಲಿ ತೆರಿಗೆ ವಿನಾಯ್ತಿ ನೀಡಿದೆ.

ಯಾರಿಗೆ ವಿನಾಯ್ತಿ?
ನವೋದ್ಯಮದಲ್ಲಿ ಹೂಡಿಕೆ ಮಾಡುವವರು ನೋಂದಾಯಿಸಿಕೊಳ್ಳದೇ ಇದ್ದರೆ (ವೆಂಚರ್‌ ಕ್ಯಾಪಿಟಲ್‌ ಆಗಿ ನೋಂದಾಯಿಸಿಕೊಂಡಿರಬಾರದು) ಅಂತಹ ಹೂಡಿಕೆಗೆ ತೆರಿಗೆ ವಿನಾಯ್ತಿ ಇರುತ್ತದೆ. ಹೂಡಿಕೆಯು ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿದ್ದರೂ ಸಹ ಆ ಹಣಕ್ಕೆ ತೆರಿಗೆ ಇರುವುದಿಲ್ಲ.

* ಜಾಗತಿಕ ಸ್ಟಾರ್ಟ್‌ಅಪ್‌ ರಂಗದಲ್ಲಿ ಭಾರತದ ಸ್ಥಾನ
* ಸ್ಟಾರ್ಟ್‌ಅಪ್‌ ಪ್ರಗತಿ ವೇಗಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಸ್ಥಾನ
* ₹26,800 ಕೋಟಿ 650 ನವೋದ್ಯಮಗಳಿಗೆ ಬಂದಿರುವ ಬಂಡವಾಳ

***
ಸ್ವಂತ ಉದ್ಯಮ ಸ್ಥಾಪಿಸ ಬಯಸುವವರಿಗೆ ಸ್ಟಾರ್ಟ್‌ಅಪ್‌ ಇಂಡಿಯಾ ಒಂದು ಕ್ರಾಂತಿಕಾರಿ ಯೋಜನೆಯಾಗಿದೆ. ಹೊಸ ಯೋಚನೆಗಳು ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರು ವವರಿಗೆ ಅವರ ಯೋಚನೆಗಳನ್ನು ಸಾಕಾರಗೊಳಿಸಲು ಸರ್ಕಾರ ಬೆಂಬಲ ನೀಡುತ್ತದೆ. ಯೋಜನೆಯ ಯಶಸ್ಸಿನಿಂದ ಆರ್ಥಿಕ ಸದೃಢ ದೇಶ ನಿರ್ಮಾಣಕ್ಕೆ ಸಾಧ್ಯವಾಗಲಿದೆ
–ನರೇಂದ್ರ ಮೋದಿ, ಪ್ರಧಾನಿ

***

ಐರೋಪ್ಯ ಒಕ್ಕೂಟ ಮತ್ತು ಭಾರತದಲ್ಲಿ ನವೋದ್ಯಮಗಳಿಗೆ ಉಜ್ವಲ ಭವಿಷ್ಯವಿದ್ದು, ಭವಿಷ್ಯದಲ್ಲಿ ಹೊಸ ಅಧ್ಯಾಯ ಬರೆಯಲಿವೆ
–ರೋಲ್ಯಾಂಡ್‌ ಬರ್ಗರ್‌ , ವ್ಯವಸ್ಥಾಪಕ ಪಾಲುದಾರ ಡಾ. ವಿಲ್ಫ್ರೆಡ್‌ ಅಲ್ಬುರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.