ADVERTISEMENT

ಹೋಟೆಲ್‌ ಸಿಬ್ಬಂದಿಗೆ ಸೇವಾಶುಲ್ಕದ ಭಾಗ

ಪಿಟಿಐ
Published 24 ಏಪ್ರಿಲ್ 2017, 19:35 IST
Last Updated 24 ಏಪ್ರಿಲ್ 2017, 19:35 IST

ನವದೆಹಲಿ: ಸೇವಾಶುಲ್ಕದ ರೂಪದಲ್ಲಿ ಗ್ರಾಹಕರಿಂದ ವಸೂಲು ಮಾಡುವ ಹಣ ಹೋಟೆಲ್‌ ಸಿಬ್ಬಂದಿಗೆ ತಲುಪುತ್ತದೆಯೇ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರಶ್ನಿಸಿದ್ದಾರೆ.

ಸೇವಾಶುಲ್ಕ ಕಡ್ಡಾಯವಲ್ಲ. ಗ್ರಾಹಕರು  ಸ್ವ ಇಚ್ಛೆಯಿಂದ ನೀಡುವ ಭಕ್ಷೀಸು (ಟಿಪ್ಸ್‌) ಹಣದಲ್ಲಿ  ಸಿಬ್ಬಂದಿ ಪಾಲು ಎಷ್ಟು ಎನ್ನುವ ವಿಷಯವನ್ನು ಬಹಿರಂಗಪಡಿಸುವಂತೆ  ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಮಾಲೀಕರಿಗೆ ಸೂಚಿಸಿದ್ದಾರೆ.

ಸೇವಾ ಶುಲ್ಕ ಕಡ್ಡಾಯವಲ್ಲ ಎಂದು ಇತ್ತೀಚೆಗೆ ಸ್ಪಷ್ಟಪಡಿಸಿದ್ದ ಕೇಂದ್ರ ಸರ್ಕಾರ, ಈ ನಿರ್ಧಾರವನ್ನು ಗ್ರಾಹಕರು ವಿವೇಚನೆಗೆ ಬಿಟ್ಟಿತ್ತು. ಈ ಬಗ್ಗೆ  ಹೊಸ ಮಾರ್ಗದರ್ಶಿ ಸೂತ್ರಗಳಿಗೂ ಅನುಮೋದನೆ ನೀಡಿದೆ.

ADVERTISEMENT

ಗ್ರಾಹಕರಿಂದ ಸಂಗ್ರಹಿಸಿದ ಸೇವಾಶುಲ್ಕದಲ್ಲಿ ಶೇ 30ರಷ್ಟು ಹಣವನ್ನು ಸಿಬ್ಬಂದಿಗೆ ನೀಡುತ್ತಿರುವುದಾಗಿ ಕೆಲವು ಹೋಟೆಲ್‌ಗಳು ಹೇಳುತ್ತಿವೆ. ನಿಜವಾಗಿಯೂ ಎಷ್ಟು ಹಣ ಸಿಬ್ಬಂದಿಗೆ ತಲುಪುತ್ತದೆ ಎಂಬ ಮಾಹಿತಿ ನಿಖರವಾಗಿ ಗೊತ್ತಿಲ್ಲ ಎಂದು ಪಾಸ್ವಾನ್‌ ಶಂಕೆ ವ್ಯಕ್ತಪಡಿಸಿದ್ದಾರೆ.  ಈ ಬಗ್ಗೆ ಹೋಟೆಲ್‌ ಮಾಲೀಕರು ದಾಖಲೆ ಇಟ್ಟುಕೊಂಡು ಅದನ್ನು ಬಹಿರಂಗಪಡಿಸುವಂತೆಯೂ ಅವರು ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.