ADVERTISEMENT

₹ 10 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ ಗುರಿ

ಪಿಟಿಐ
Published 25 ಫೆಬ್ರುವರಿ 2018, 20:16 IST
Last Updated 25 ಫೆಬ್ರುವರಿ 2018, 20:16 IST
₹ 10 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ ಗುರಿ
₹ 10 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ ಗುರಿ   

ನವದೆಹಲಿ: ಬಜೆಟ್‌ನಲ್ಲಿ ನಿಗದಿಪಡಿಸಿರುವ ₹ 10.05 ಲಕ್ಷ ಕೋಟಿಗಳಷ್ಟು ನೇರ ತೆರಿಗೆ ಸಂಗ್ರಹದ ಗುರಿ ಸಾಧಿಸಲು, ವಹಿವಾಟು ಹೆಚ್ಚಿಗೆ ಇರುವ ಕ್ಷೇತ್ರಗಳ ಕಡೆ ಗಮನ ಕೊಡುವಂತೆ ಅಧಿಕಾರಿಗಳಿಗೆ ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಸೂಚಿಸಿದೆ.

2018–19ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ವೈಯಕ್ತಿಕ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆಯೂ ಸೇರಿದಂತೆ ನೇರ ತೆರಿಗೆಯ ಪ್ರಮಾಣವನ್ನು ಈ ಹಿಂದಿನ ₹9.80 ಲಕ್ಷ ಕೋಟಿಯಿಂದ ₹10.05 ಕೋಟಿಗೆ ಹೆಚ್ಚಿಸಲಾಗಿದೆ.

ಇತ್ತೀಚೆಗೆ ನಡೆದಿದ್ದ ಮಂಡಳಿಯ ಸಭೆಯಲ್ಲಿ ಹೆಚ್ಚು ವಹಿವಾಟು ನಡೆಯುವ ಕ್ಷೇತ್ರಗಳ ಕಡೆಗೆ ಗಮನಕೊಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ADVERTISEMENT

‘ಜನವರಿ–ಮಾರ್ಚ್‌ ತಿಂಗಳ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಅಕ್ಟೋಬರ್‌–ಡಿಸೆಂಬರ್ ತ್ರೈಮಾಸಿಕದಲ್ಲಿ ಸಾಧಿಸಿದ ಪ್ರಗತಿ ಇದೇ ರೀತಿ ಮುಂದುವರೆದರೆ ₹10 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಸುಲಭವಾಗಿ ತಲುಪಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆದಾಯ ತೆರಿಗೆಯ ದಾಖಲೆಗಳು ಹೊಂದಾಣಿಕೆ ಆಗುತ್ತಿವೆಯೇ ಎಂಬುದನ್ನು ಪರಿಶೀಲಿಸಲಿದ್ದೇವೆ. ಜತೆಗೆ ಹಣ ಹಿಂತಿರುಗಿಸುವ ಬಗ್ಗೆಯೂ ಗಮನ ನೀಡಲಿದ್ದೇವೆ. ತೆರಿಗೆ ಸಂಗ್ರಹದ ಗುರಿಮುಟ್ಟಲು ಕೆಲವು ನಿರ್ದಿಷ್ಟ ಕ್ಷೇತ್ರಗಳ ಕಡೆಗೆ ಗಮನ ಹರಿಸಲಾಗಿದೆ. ಸ್ವತಃ ಲೆಕ್ಕಪತ್ರ ವಿವರಗಳನ್ನು ನಿರ್ವಹಣೆ ಮಾಡಿಕೊಂಡು ತೆರಿಗೆ ಸಲ್ಲಿಸುತ್ತಿರುವ ಕ್ಷೇತ್ರಗಳ ಕಡೆ ಮಂಡಳಿ ಹೆಚ್ಚು ಗಮನಕೊಟ್ಟು ತೆರಿಗೆ ಸಂಗ್ರಹ ಮಾಡಲಿದೆ. ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಬಗ್ಗೆಯೂ ಮಂಡಳಿ ಪರಿಶೀಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.