ADVERTISEMENT

2ಜಿ ಸ್ಪೆಕ್ಟ್ರಂ ಹಗರಣ ಅ.25ಕ್ಕೆ ವಿಚಾರಣೆ

ಪಿಟಿಐ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
2ಜಿ ಸ್ಪೆಕ್ಟ್ರಂ ಹಗರಣ ಅ.25ಕ್ಕೆ ವಿಚಾರಣೆ
2ಜಿ ಸ್ಪೆಕ್ಟ್ರಂ ಹಗರಣ ಅ.25ಕ್ಕೆ ವಿಚಾರಣೆ   

ನವದೆಹಲಿ: 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಒ.ಪಿ.ಸೈನಿ ಅವರು ಅಕ್ಟೋಬರ್ 25ಕ್ಕೆ ನಿಗದಿಪಡಿಸಿದ್ದಾರೆ.

ಸಿಬಿಐ ದಾಖಲಿಸಿರುವ ಈ ಪ್ರಕರಣದಲ್ಲಿ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಹಾಗೂ ಡಿಎಂಕೆ ಸಂಸದೆ ಕನಿಮೋಳಿ ಅವರು ಆರೋಪಿಗಳಾಗಿದ್ದಾರೆ.

ಇದನ್ನು ಹೊರತುಪಡಿಸಿ ಸಿಬಿಐನ ಮತ್ತೊಂದು ಹಾಗೂ ಜಾರಿ ನಿರ್ದೇಶನಾಲಯದ ಒಂದು ಪ್ರಕರಣ ಇದೆ. ಈ ಮೂರು ಪ್ರಕರಣಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸೈನಿ ಅವರು ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.