ADVERTISEMENT

2016ರಲ್ಲಿ ವಾಹನ ರಫ್ತು ಶೇ 5 ಇಳಿಕೆ

ಪಿಟಿಐ
Published 15 ಜನವರಿ 2017, 19:30 IST
Last Updated 15 ಜನವರಿ 2017, 19:30 IST

ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ವಾಹನಗಳಿಗೆ ಬೇಡಿಕೆ ತಗ್ಗಿರುವುದರಿಂದ  ದೇಶದ ವಾಹನ ರಫ್ತು ಪ್ರಮಾಣವು 2016ರಲ್ಲಿ ಶೇ 5 ರಷ್ಟು ಇಳಿಕೆ ಕಂಡಿದೆ. ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾರಾಟ ತಗ್ಗಿರುವುದರಿಂದ ರಫ್ತು ವಹವಾಟಿನ ಮೇಲೆ ಪೆಟ್ಟು ಬಿದ್ದಿದೆ.

2016ರಲ್ಲಿ ಒಟ್ಟಾರೆ 34,34,322 ವಾಹನಗಳನ್ನು ರಫ್ತು ಮಾಡಲಾಗಿದೆ. 2015ರಲ್ಲಿ 36,14,851 ವಾಹನಗಳು ರಫ್ತಾಗಿದ್ದವು ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್‌ಐಎಎಂ) ತಿಳಿಸಿದೆ.

‘ಸರಕು ಮತ್ತು ತೈಲ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ  ದೇಶಗಳ ರಫ್ತು ವಹಿವಾಟು ಉತ್ತಮವಾಗಿಲ್ಲ. ಹೆಚ್ಚು ವಾಹನಗಳು ರಫ್ತಾಗುವ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಅರ್ಥವ್ಯವಸ್ಥೆ ಪ್ರಗತಿ ಸಾಧಿಸಲು ಹೆಣಗಾಡುತ್ತಿವೆ’ ಎಂದು ವಾಹನ ಉದ್ಯಮದ ಪರಿಣತ ಅಬ್ದುಲ್ ಮಜೀದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.