ADVERTISEMENT

32 ಸಾವಿರ ಗಡಿ ತಲುಪಿದ ಸೂಚ್ಯಂಕ

ಪಿಟಿಐ
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST
32 ಸಾವಿರ ಗಡಿ ತಲುಪಿದ ಸೂಚ್ಯಂಕ
32 ಸಾವಿರ ಗಡಿ ತಲುಪಿದ ಸೂಚ್ಯಂಕ   

ಮುಂಬೈ: ಮೂರು ದಿನದ ವಹಿವಾಟಿನಲ್ಲಿ ಸೂಚ್ಯಂಕಗಳು ಏರಿಳಿತ ಕಂಡಿವೆ. ಚಿಲ್ಲರೆ ಹಣದುಬ್ಬರ ಇಳಿಕೆ, ಕೈಗಾರಿಕಾ ಪ್ರಗತಿ ಏರಿಕೆಯ ಪ್ರಭಾವದಿಂದ ವಹಿವಾಟಿನ ಮೊದಲ ದಿನ ಸೋಮವಾರ ಸೂಚ್ಯಂಕಗಳು ಹೊಸ ಮಟ್ಟಕ್ಕೆ ಏರಿಕೆ ಕಂಡವು.

ಮಂಗಳವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಇಳಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ ಅಲ್ಪ ಏರಿಕೆ ಕಂಡುಕೊಂಡಿತು. ಬುಧವಾರದ ವಹಿವಾಟಿನಲ್ಲಿಯೂ ಬಿಎಸ್‌ಇ 25 ಇಳಿಕೆ ಕಂಡಿತು.

ಬುಧವಾರಕ್ಕೆ ಅಂತ್ಯವಾದ ವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 151 ಅಂಶ ಹೆಚ್ಚಾಗಿ 32,584 ಅಂಶಗಳಲ್ಲಿ ನಿಫ್ಟಿ 43 ಅಂಶ ಹೆಚ್ಚಾಗಿ 10,210 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT

ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್‌, ಲೋಹ, ವಿದ್ಯುತ್, ಎಫ್‌ಎಂಸಿಜಿ, ವಾಹನ, ಆರೋಗ್ಯ ಸೇವೆ, ತಂತ್ರಜ್ಞಾನ ವಲಯಗಳಲ್ಲಿ ಉತ್ತಮ ಖರೀದಿ ವಹಿವಾಟು ನಡೆಯಿತು.

ಮುಹೂರ್ತದ ವಹಿವಾಟು: ಗುರುವಾರ 6.30 ರಿಂದ 7.30ರವರೆಗೆ ನಡೆದ ಒಂದು ಗಂಟೆಗಳ ಅವಧಿಯ ಮುಹೂರ್ತದ ವಹಿವಾಟು ದೇಶದ ಷೇರುಪೇಟೆಗಳಲ್ಲಿ ಚೇತರಿಕೆ ನೀಡಲು ವಿಫಲವಾಯಿತು. ಬಿಎಸ್‌ಇ 194 ಅಂಶ ಇಳಿಕೆ ಕಂಡು, 32,389 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ನಿಫ್ಟಿ 64 ಅಂಶ ಇಳಿದು, 10,146 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

*
ವಾರದ ವಹಿವಾಟು

ದೇಶಿ, ವಿದೇಶ ಬಂಡವಾಳ ಹೊರಹರಿವು ₹1,329 ಕೋಟಿ

ಬಿಎಸ್‌ಇ ವಹಿವಾಟು ಮೊತ್ತ ₹10,448 ಕೋಟಿ

ಎನ್‌ಎಸ್ಇ ವಹಿವಾಟು ಮೊತ್ತ ₹88,518 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.