ADVERTISEMENT

ಮಾರುತಿ ಸುಜುಕಿ, ಹೋಂಡಾಗೆ ಹೂಡಿಕೆಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ವಲಯದಲ್ಲಿ ಬಂಡವಾಳ ಹೂಡಲು ಬೃಹತ್ ಕೈಗಾರಿಕೆ ಸಚಿವ  ಆರ್.ವಿ. ದೇಶಪಾಂಡೆ ಅವರು ಮಾರುತಿ ಸುಜುಕಿ ಮತ್ತು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ.

‘ಕರ್ನಾಟಕವು ಈ ನಿಟ್ಟಿನಲ್ಲಿ ಎಲ್ಲರಿಗಿಂತ ಮೊದಲು ‘ವಿದ್ಯುತ್ ಚಾಲಿತ ವಾಹನ ಮತ್ತು ಇಂಧನ ಸಂಗ್ರಹಣೆ ನೀತಿ ಜಾರಿಗೆ ತಂದು ಮುಂದಡಿ ಇಟ್ಟಿದೆ’ ಎಂದು ಹೇಳಿದ್ದಾರೆ.

ರಾಜ್ಯವು ಸುಲಲಿತ ಔದ್ಯಮಿಕ ವಾತಾವರಣ ಸೃಷ್ಟಿಸಲು ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ. ವಾಹನ ತಯಾರಿಕಾ ಕ್ಷೇತ್ರದಲ್ಲಿ ರಾಜ್ಯವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಸೂಕ್ತ ವಾತಾವರಣವೂ ಇದೆ. ಮಾರುತಿ ಸುಜುಕಿ ಮತ್ತು ಹೋಂಡಾ ಕಂಪನಿಗಳು ಈ ಸದವಕಾಶ ಬಳಸಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.