ADVERTISEMENT

ತಯಾರಿಕಾ ವಲಯ ಪ್ರಗತಿ 5 ವರ್ಷದ ಗರಿಷ್ಠ ಮಟ್ಟಕ್ಕೆ

ಪಿಟಿಐ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST

ನವದೆಹಲಿ: ದೇಶದ ತಯಾರಿಕಾ ವಲಯ ಡಿಸೆಂಬರ್‌ನಲ್ಲಿ ಉತ್ತಮ ಪ್ರಗತಿ ಸಾಧಿಸುವ ಮೂಲಕ 2017ನೇ ವರ್ಷ ಅಂತ್ಯವಾಗಿದೆ.

ನಿಕೇಯ್‌ ಇಂಡಿಯಾ ಮ್ಯಾನ್ಯುಫ್ಯಾಕ್ಟರಿಂಗ್‌ ಪರ್ಚೇಸಿಂಗ್‌ ಮ್ಯಾನೇರಜ್ಸ್‌ ಇಂಡೆಕ್ಸ್‌ (ಪಿಎಂಐ) ಡಿಸೆಂಬರ್‌ನಲ್ಲಿ 52.6 ರಿಂದ 54.7ಕ್ಕೆ ಏರಿಕೆ ಕಂಡಿದೆ. ಇದು ಐದು ವರ್ಷಗಳಲ್ಲೇ ದಾಖಲಾಗಿರುವ ಸೂಚ್ಯಂಕದ ಅತ್ಯಂತ ಗರಿಷ್ಠ ಮಟ್ಟವಾಗಿದೆ.

ಸತತ ನಾಲ್ಕನೇ ತಿಂಗಳಿನಲ್ಲಿ ಸೂಚ್ಯಂಕ 50ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದೆ.

ADVERTISEMENT

ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳಿಂದ ಉತ್ತಮ ಬೇಡಿಕೆ ಬಂದಿದೆ ಇದರಿಂದಾಗಿ ಪ್ರಗತಿಯಲ್ಲಿ ಏರಿಕೆಯಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆಯ ಅರ್ಥಿಕ ತಜ್ಞ ಅಶನ್‌ ದೋಧಿಯಾ ಹೇಳಿದ್ದಾರೆ.

ತಯಾರಿಕಾ ವಲಯವು 13 ತಿಂಗಳ ಬಳಿಕ ನವೆಂಬರ್‌ನಲ್ಲಿ ಚೇತರಿಕೆ ಹಾದಿಗೆ ಮರಳಿತು. ಸೂಚ್ಯಂಕವು ಅಕ್ಟೋಬರ್‌ನಲ್ಲಿ 50.3 ರಷ್ಟಿತ್ತು. ಅದು ನವೆಂಬರ್‌ನಲ್ಲಿ 52.6ಕ್ಕೆ ಏರಿಕೆ ದಾಖಲಿಸಿತು. ಜಿಎಸ್‌ಟಿ ದರ ಇಳಿಕೆ ವಲಯದ ಚೇತರಿಕೆಗೆ ನರೆವಾಗಿದೆ ಎಂದು ತಜ್ಞರು ಹೇಳಿದ್ದಾರೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.