ADVERTISEMENT

ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಮೂಲದ ಇ–ಕಾಮರ್ಸ್ ದೈತ್ಯ ’ಫ್ಲಿಪ್‌ಕಾರ್ಟ್‌’ ಕಂಪನಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯನ್ನು ಇದೇ ಮೊದಲ ಬಾರಿಗೆ ಚಾಲನೆಗೆ ತಂದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2024, 5:07 IST
Last Updated 6 ಮಾರ್ಚ್ 2024, 5:07 IST
<div class="paragraphs"><p>ಫ್ಲಿಪ್‌ಕಾರ್ಟ್‌&nbsp;ಯುಪಿಐ </p></div>

ಫ್ಲಿಪ್‌ಕಾರ್ಟ್‌ ಯುಪಿಐ

   

ಬೆಂಗಳೂರು: ಬೆಂಗಳೂರು ಮೂಲದ ಇ–ಕಾಮರ್ಸ್ ದೈತ್ಯ ’ಫ್ಲಿಪ್‌ಕಾರ್ಟ್‌’ ಕಂಪನಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯನ್ನು ಇದೇ ಮೊದಲ ಬಾರಿಗೆ ಚಾಲನೆಗೆ ತಂದಿದೆ.

ಫ್ಲಿಪ್‌ಕಾರ್ಟ್‌ ಬಳಕೆದಾರರು ಇನ್ನುಮುಂದೆ ಫ್ಲಿಫ್‌ಕಾರ್ಟ್‌ ಆ್ಯಪ್‌ನಲ್ಲೇ ಯುಪಿಐ ಬಳಸಬಹುದು. ಅದೇ ಆ್ಯಪ್‌ನಲ್ಲಿ ಯುಪಿಐ ಚಾಲನೆಗೊಳಿಸಿ ತ್ವರಿತವಾಗಿ ಪಾವತಿ ಹಾಗೂ ಇತರ ಸೇವೆಗಳನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ.

ADVERTISEMENT

ಈ ಕುರಿತು ಫ್ಲಿಪ್‌ಕಾರ್ಟ್‌ ತನ್ನ ಆ್ಯಪ್‌ನಲ್ಲಿ ಯುಪಿಐ ಚಾಲನೆಗೊಳಿಸಲು ಗ್ರಾಹಕರಿಗೆ ಉತ್ತೇಜಿಸುವ ಜಾಹೀರಾತುಗಳನ್ನು ಪೋಸ್ಟ್ ಮಾಡಿದೆ.

ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದೊಡನೆ ಫ್ಲಿಪ್‌ಕಾರ್ಟ್‌ ಯುಪಿಐ ಸೇವೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಸದ್ಯ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಮಾತ್ರ ಫ್ಲಿಪ್‌ಕಾರ್ಟ್‌ ಯುಪಿಐ ಕೆಲಸ ಮಾಡಲಿದೆ.

ಇತ್ತೀಚೆಗೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಆರ್‌ಬಿಐ ನಿಷೇಧ ಹೇರಿರುವ ಬೆನ್ನಲ್ಲೇ ಫ್ಲಿಪ್‌ಕಾರ್ಟ್‌ ಈ ಮಹತ್ವದ ಕ್ರಮ ಕೈಗೊಂಡಿದೆ. 2019ರಲ್ಲಿ ಕೋಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಸೇವೆಯನ್ನೂ ಈ ಕಂಪನಿ ಜಾರಿಗೊಳಿಸಿತ್ತು.

ತನ್ನ ಗ್ರಾಹಕರಿಗೆ ತ್ವರಿತ ಹಾಗೂ ಗ್ರಾಹಕ ಸ್ನೇಹಿ ಸೇವೆಯನ್ನು ಒದಗಿಸಿ ಕೊಡುವುದಕ್ಕಾಗಿ ಯುಪಿಐ ಸೇವೆ ಚಾಲನೆಗೊಳಿಸಲಾಗಿದೆ ಎಂದು ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್‌ ಹೇಳಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆ ಮಾಡುವುದು ಹೇಗೆ?

ಮೊದಲು ನಿಮ್ಮಲ್ಲಿ ಫ್ಲಿಪ್‌ಕಾರ್ಟ್‌ ಆಂಡ್ರಾಯ್ಡ್‌ ಆ್ಯಪ್ ಇರಬೇಕು

ಇದರಲ್ಲಿ UPI ಎಂದು ತೋರಿಸುವ ಪೋಸ್ಟರ್ ಮೇಲೆ ಕ್ಲಿಕ್ ಮಾಡಬೇಕು

ನಂತರ ಅದರಲ್ಲಿ ಆ್ಯಪ್ ಜೊತೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್‌ ಅನ್ನು ಲಿಂಕ್ ಮಾಡಬೇಕು

ಆಗ ಸಂಬಂಧಿಸಿದ ಮಾಹಿತಿಯನ್ನು ಪೂರೈಸಿ ಯುಪಿಐ ಪಿನ್ ಸೃಜಿಸಬೇಕು

ಪೂರ್ಣಗೊಂಡ ನಂತರ ಕ್ಯೂಆರ್ ಕೋಡ್ ಅಥವಾ ಮೊಬೈಲ್ ನಂಬರ್ ಮೂಲಕ ಪಾವತಿ ಹಾಗೂ ಸ್ವೀಕೃತಿಗಳನ್ನು ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.