ADVERTISEMENT

ಗಮನ ಸೆಳೆದ ಎತ್ತಿನ ಗಾಡಿಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:34 IST
Last Updated 2 ಡಿಸೆಂಬರ್ 2017, 8:34 IST

ವಾಡಿ: ಒಂದೆಡೆ 10ಕ್ಕೂ ಅಧಿಕ ಎತ್ತಿನ ಬಂಡಿಗಳಲ್ಲಿ ವಿವಿಧ ಸ್ವಾತಂತ್ರ್ಯ ಹೋರಾ ಟಗಾರರ ವೇಷತೊಟ್ಟ ವಿದ್ಯಾರ್ಥಿಗಳು, ಇನ್ನೊಂದೆಡೆ ಡೊಳ್ಳು ಕುಣಿತ, ಹಲಗೆಯ ನಾದದೊಂದಿಗೆ ಲೇಜಿಮ್ ಹಾಕಿದ ವಿದ್ಯಾರ್ಥಿಗಳು. ಶಬ್ಧಮಾಲಿನ್ಯ, ವಾಯುಮಾಲಿನ್ಯ, ಸಿಗ ರೇಟ್ ಸೇವನೆಯ ದುಷ್ಪರಿಣಾಮಗಳ ಸಂದೇಶ ಹೊತ್ತ ವಿಜ್ಞಾನ ಪ್ರದರ್ಶನಗಳು ಇವು ಸಮೀಪದ ಲಾಡ್ಲಾಪುರದಲ್ಲಿ ಬುಧವಾರ ವಿಜ್ಞಾನ ಕಲಿಕಾ ಮೇಳಾ ಜಾಥಾ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರ್ಗಿ ಮಾರ್ಗದರ್ಶಿ ಶಿಕ್ಷಣ ಸಂಸ್ಥೆ, ಕಲಬುರ್ಗಿ ಹಾಗೂ ಬೆಂಗಳೂರಿನ ಕ್ರೈ ಸಂಸ್ಥೆಗಳ ಆಶ್ರಯದಲ್ಲಿ ಲಾಡ್ಲಾಪುರ ಗ್ರಾಮದಲ್ಲಿ ಬುಧವಾರ ವಿಜ್ಞಾನ ಮೇಳ ಹಮ್ಮಿಕೊಳ್ಳಲಾಗಿತ್ತು. ಮೇಳದ ಅಂಗವಾಗಿ ಗ್ರಾಮದ ಬಸ್‌ನಿಲ್ದಾಣ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನ ಮೆರವಣಿಗೆ ನಡೆಸಿ ಪರಿಸರ, ವಿಜ್ಞಾನ ಹಾಗೂ ಶಿಕ್ಷಣದ ಮಹತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿ ಮಕ್ಕಳನ್ನು ಹಾಗೂ ವಿವಿಧ ಸೂಕ್ತಿ ಪ್ರದರ್ಶನ ಹೊತ್ತ ಸುಮಾರು 10ಕ್ಕೂ ಅಧಿಕ ಬಂಡಿಗಳು ಸಾರ್ವಜನಿಕರ ಗಮನ ಸೆಳೆದವು. ವಿವಿಧ ಪ್ರಕಾರದ ವಾದ್ಯ ಮೇಳಗಳು, ಕಲಾತಂಡಗಳು ಮೆರವಣಿಗೆಗೆ ಸಾಥ್ ನೀಡಿದ್ದವು.

ನಂತರ ಹನುಮಾನ ಮಂದಿರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಮಡಿವಾಳಪ್ಪ ಹೆರೂರು, ‘ಅಜ್ಞಾನ, ಮೂಢನಂಬಿಕೆಗಳು ಸಮಾಜ ದಲ್ಲಿ ವ್ಯಾಪಕವಾಗಿ ಬೇರೂರುತ್ತಿವೆ. ಸಮಾಜವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ದುಷ್ಟಶಕ್ತಿಗಳ ಅಟ್ಟಹಾಸ ಹೆಚ್ಚಾಗಿದ್ದು, ಇದಕ್ಕೆ ಪರ್ಯಾಯವಾಗಿ ಪ್ರಗತಿಪರ ವಿಚಾರಗಳು, ಆಲೋಚ ನೆಗಳು ವಿಜೃಂಭಿಸಬೇಕಾಗಿದೆ. ವೈಜ್ಞಾ ನಿಕ ಆಲೋಚನೆಗಳು ಬೆಳೆದು ನಾಗ ರಿಕ ಸಮಾಜ ನಾಗಲೋಟದಲ್ಲಿ ಮುನ್ನುಗ್ಗಬೇಕಾದರೆ ಜನರು ಜೀವನದ ಪ್ರತಿ ಅಂಶವನ್ನು ಪ್ರಶ್ನಿಸಿ, ಪರೀಕ್ಷಿಸಿ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುರಿತು ಆಸಕ್ತಿ ಬೆಳೆಸುವ ವಿಜ್ಞಾನ ಪ್ರದರ್ಶನಗಳ ಆಯೋಜನೆ ಮಾಡಿರುವ ವಿವಿಧ ಸಂಘಗಳ ಕಾರ್ಯ ಶ್ಲಾಘನೀಯವಾಗಿದ್ದು, ಸಮಾಜದ ಬೆಳವಣಿಗೆಗೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಇಂತಹ ಪ್ರದರ್ಶನಗಳು ಹೆಚ್ಚಾಗಿ ಆಯೋಜನೆಗೊಳ್ಳಲಿ ಎಂದರು.

ವಿವಿಧ ಗ್ರಾಮದ ಹಲವು ಶಾಲೆಗಳ ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಪರಿಸರ, ಗಣಿತ, ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಹಲವು ಪ್ರದರ್ಶನಗಳು, ಸಾರ್ವಜನಿಕರ ಗಮನ ಸೆಳೆದವು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.