ADVERTISEMENT

ಅನುದಾನ ಕೊರತೆ, ರಂಗಮಂದಿರ ಅಪೂರ್ಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:43 IST
Last Updated 18 ಜನವರಿ 2017, 5:43 IST
ಅನುದಾನ ಕೊರತೆ, ರಂಗಮಂದಿರ ಅಪೂರ್ಣ
ಅನುದಾನ ಕೊರತೆ, ರಂಗಮಂದಿರ ಅಪೂರ್ಣ   

ಇಳಕಲ್: ವೃತ್ತಿ ರಂಗಭೂಮಿಯ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ನಗರಕ್ಕೆ 2006ರಲ್ಲಿ ಸುವರ್ಣ ಕರ್ನಾಟಕ ವರ್ಷಾ ಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಜೂರು ಮಾಡಿ ರುವ ಸುವರ್ಣ ರಂಗ ಮಂದಿರ 11 ವರ್ಷ ಕಳೆದರೂ ನಿರ್ಮಾಣಗೊಂಡಿಲ್ಲ. ಕಲಾವಿದರ ಬಹುದಿನದ ಬೇಡಿಕೆ ಈಡೇರುವ ಲಕ್ಷಣಗಳಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಜಿಲ್ಲೆಯಲ್ಲಿಯೇ ಅವರ ಇಲಾ ಖೆಯ ಕಾಮಗಾರಿಗೆ ಅನುದಾನದ ಕೊರತೆಯಾಗಿ ಒಂದು ವರ್ಷದಿಂದ ಸ್ಥಗಿತಗೊಂಡಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗೋವಿಂದ ಕಾರಜೋಳ, ಈಗ ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರೂ ರಂಗಮಂದಿರ ಪೂರ್ಣಗೊಂಡಿಲ್ಲ. ಅನು ದಾನ ನೀಡುವಂತೆ ಕಲಾವಿದರು, ರಂಗಾ ಸ್ತಕರು ಅನೇಕ ಸಲ ಮನವಿ ಮಾಡಿ ದರೂ ಪ್ರಯೋಜನವಾಗಿಲ್ಲ. ವೃತ್ತಿರಂಗ ಭೂಮಿ ತವರೂರು ಎಂಬ ಖ್ಯಾತಿ ಯೊಂದಿಗೆ ಮೂರೂವರೆ ದಶಕಗಳಿಂದ ರಾಜ್ಯದ ರಂಗಾಸಕ್ತರ ಗಮನ ಸೆಳೆ ದಿರುವ ಹವ್ಯಾಸಿ ರಂಗತಂಡ ‘ಸ್ನೇಹ ರಂಗ’ ಇಲ್ಲಿ ಕ್ರಿಯಾಶೀಲವಾಗಿದೆ. ಆದರೆ ಸುಸಜ್ಜಿತ ರಂಗಮಂದಿರದ ಇಲ್ಲದಿರು ವುದು ವಿಪರ್ಯಾಸ.

ಕರ್ನಾಟಕ ಸುವರ್ಣ ಮಹೋತ್ಸ ವದ ಸ್ಮರಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದ 7 ಕಡೆಗಳಲ್ಲಿ ತಲಾ ₹ 25 ಲಕ್ಷ ವೆಚ್ಚದಲ್ಲಿ ಸುವರ್ಣ ರಂಗಮಂದಿರ ನಿರ್ಮಿಸಲು ಉದ್ದೇಶಿಸಿ, ಮಂಜೂರು ಮಾಡಿತ್ತು. ಅಂದು ಮುಖ್ಯ ಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅ.10, 2006ರಂದು ಸುವರ್ಣ ರಂಗ ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆಗ ಶಾಸಕರಾಗಿದ್ದ ದೊಡ್ಡನಗೌಡ ಪಾಟೀಲ ₹ 25 ಲಕ್ಷ ಅನುದಾನ ಕಡಿಮೆ ಯಾಗುತ್ತದೆ ಎಂದು ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳರ ಮೂಲಕ ಹೆಚ್ಚುವರಿಯಾಗಿ ₹ 50 ಲಕ್ಷ ಅನುದಾನ ಮಂಜೂರು ಮಾಡಿಸಿದ್ದರು.

ಆದರೆ ರಂಗಮಂದಿರಕ್ಕಾಗಿ  ಕಾಯ್ದಿರಿಸಿದ ನಿವೇಶನ ನಗರಸಭೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆಯಾಗಬೇಕು ಹಾಗೂ ಈ ನಿವೇಶನದಲ್ಲಿದ್ದ ಬಯಲು ರಂಗ ಮಂದಿರ ಒಡೆಯುವುದಕ್ಕೆ ತಾಂತ್ರಿಕ ಅಡಚಣೆಗಳಿವೆ ಎಂಬ ಕಾರಣದಿಂದ ಕಾಮಗಾರಿ ಆರಂಭವೇ ಆಗಲಿಲ್ಲ.

ವಿಜಯಾನಂದ ಕಾಶಪ್ಪನವರ ಶಾಸಕರಾದ ನಂತರ ರಂಗಮಂದಿರದ ಯೋಜನೆ ಹಾಗೂ ಅಂದಾಜು ವೆಚ್ಚ ವನ್ನು ಪರಿಷ್ಕರಿಸಲಾಯಿತು.            ಅಂದಾಜು ವೆಚ್ಚ ₹ 2.5 ಕೋಟಿಗೆ ಹೆಚ್ಚಿಸಿ, ಭೂಸೇನಾ ನಿಗಮಕ್ಕೆ ಗುತ್ತಿಗೆ ವಹಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಲಭ್ಯ ಇದ್ದ ₹ 75 ಲಕ್ಷ ಅನುದಾನದಲ್ಲಿ ಪ್ಲಿಂಥ್ (ಪಾಯ)ವರೆಗೆ ಕಟ್ಟಲಾಗಿದೆ. ಅನು ದಾನದ ಕೊರತೆಯ ಕಾರಣ ವರ್ಷ ದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಅನುದಾನ ಮಂಜೂರಿಗಾಗಿ ಸರ್ಕಾರಕ್ಕೆ ವರ್ಷದ ಹಿಂದೆ ಪ್ರಸ್ತಾವ          ಕಳುಹಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಹೇಳುತ್ತಾರೆ.      
 
ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಸೂಲಸಾಬ್‌ ಕಂದ ಗಲ್ ಹಾಗೂ ಸ್ನೇಹರಂಗ ಅಧ್ಯಕ್ಷ ಪ್ರೊ.ಕೆ.ಎ. ಬನ್ನಟ್ಟಿ ಅವರು       ಮಾತನಾಡಿ, ‘ಸ್ವತಃ ಕಲಾವಿದರೂ ಆಗಿರುವ ಉಮಾ ಶ್ರೀ ಅವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರೂ ರಂಗ ಮಂದಿರವೊಂದು ಅನುದಾನದ ಕೊರತೆಯಿಂದ ಅಪೂರ್ಣವಾಗಿರು ವುದು ವಿಷಾದದ ಸಂಗತಿ.

ಶಾಸಕರಾದ ಕಾಶಪ್ಪನವರ ಸಚಿವೆ ಉಮಾಶ್ರೀ ಅವರೊಂದಿಗೆ ಚರ್ಚಿಸಿ ₹ 2ಕೋಟಿ ಅನುದಾನ ಬಿಡುಗಡೆ ಮಾಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಬಸವರಾಜ ಅ. ನಾಡಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.