ADVERTISEMENT

ಅರಿವಿನ ಕೊರತೆಯಿಂದ ದಾರ್ಶನಿಕರು ದೂರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:26 IST
Last Updated 23 ಏಪ್ರಿಲ್ 2017, 6:26 IST

ಹುನಗುಂದ: ಬುದ್ಧನ ತತ್ವಗಳು ಹೊರ ದೇಶಗಳಲ್ಲಿ ಹೆಚ್ಚು ಪ್ರಸಿದ್ಧವಾಗುತ್ತವೆ. ಆದರೆ ಬುದ್ಧನೂ ಸೇರಿದಂತೆ ನಮ್ಮ ದಾರ್ಶನಿಕರು ನಮ್ಮಲ್ಲಿನ ಅರಿವಿನ ಕೊರತೆಯಿಂದ ನಮ್ಮಿಂದ ದೂರ ವಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಎಚ್ಚರ ಅಗತ್ಯ ಎಂದು ಗದಗ ಡಾ.ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಸಮೀಪದ ಹಿರೇಬಾದವಾಡಗಿ ವಿಜಯ ಮಹಾಂತೇಶ ಶ್ರೀಮಠದಲ್ಲಿ ಏರ್ಪಡಿಸಿದ 3 ದಿನಗಳ ಶಿವಾನುಭವ ತರಬೇತಿ ಶಿಬಿರದಲ್ಲಿ ಶುಕ್ರವಾರ ‘ಬಸವ ತತ್ವ ಹಾಗೂ ಶೈಕ್ಷಣಿಕ ಮೌಲ್ಯಗಳು’ ವಿಷಯದ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಆಧುನಿಕತೆ ವಿರಾಟ ರೂಪ ಪಡೆದರೂ ಅಜ್ಞಾನ ತಾಂಡವವಾಡುತ್ತಿದೆ. ಶಿಕ್ಷಣ ಪಡೆದವರು ಮೌಢ್ಯ ಮತ್ತು ಇಲ್ಲದ ಆಚರಣೆಗಳಲ್ಲಿ ಮುಳುಗಿದ್ದಾರೆ ಎಂದರು.

ಶಂಕರಾಚಾರ್ಯರು, ರಾಮಾನುಜಾಚಾರ್ಯರಿಗೆ ಬಿಡಿಸಲಾಗದ ಜಾತಿ ಸಂಕೋಲೆಯ ಬೇಲಿಯನ್ನು ಅಂಬೇ ಡ್ಕರ್ ಸಂವಿಧಾನ ರಚಿಸಿ ಜಾರಿಗೊಳಿ ಸುವ ಮೂಲಕ ಸಮಾನತೆ ತರಬಯಸಿದರು. ಇಂದೂ ಕೂಡ ಮೌಢ್ಯ ದೂರಾ ಗದಿರುವುದು ವಿಸ್ಮಯವಾಗಿದೆ. ನಮ್ಮವರು ವಿವಿಧ ತೆರನಾದ ಭೇದ ಗಳನ್ನು ಮರೆಯಬೇಕು. ಶರಣರು ಮತ್ತು ದಾರ್ಶನಿಕರ ತೋರಿದ ಬೆಳಕಿನ ಹಾದಿಯಲ್ಲಿ ಸಾಗಬೇಕು ಎಂದರು.

ನಿವೃತ್ತ ನಿರ್ದೇಶಕ ಸಿದ್ದರಾಮ ಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಬಿಇಓ ಡಾ.ಗುರುನಾಥ ಹೂಗಾರ ಮಾತನಾಡಿ ದರು. ಗುರುಮಹಾಂತ ಸ್ವಾಮೀಜಿ, ಡಾ. ಮಹಾಂತ ಸ್ವಾಮೀಜಿ, ಗುರುಬಸವ ದೇವರು, ದಾವಣೆಗೆರೆ ಬಸವ ಬಳಗದ ಮುಖ್ಯಸ್ಥ ಹುಚ್ಚಪ್ಪ ಮೇಷ್ಟ್ರು, ಅನುಭಾವಿ ಡಾ.ಸಿದ್ದಣ್ಣ ಲಂಗೋಟಿ ಮತ್ತು ಹಿರಿಯ ರೈತ ಡಾ.ಮಲ್ಲಣ್ಣ ನಾಗರಾಳ ಇದ್ದರು.ಇದೇ ಸಂದರ್ಭದಲ್ಲಿ ಗ್ರಾಮದ ವಿವಿಧ ಕ್ಷೇತ್ರಗಳ ಸಾಧಕರನ್ನು ಸತ್ಕರಿಸ ಲಾಯಿತು. ಸಂಗಣ್ಣ ಗದ್ದಿ ಸ್ವಾಗತಿಸಿದರು. ಹುನಗುಂದ ವಿ.ಎಂ.ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಬಸವರಾಜ ಹಳ್ಳೂರ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.