ADVERTISEMENT

ಅಲೆಮಾರಿಗಳಿಗೆ ನಿವೇಶನ, ಮನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 5:14 IST
Last Updated 13 ನವೆಂಬರ್ 2017, 5:14 IST
ಕೂಡಲಸಂಗಮದಲ್ಲಿ ಭಾನುವಾರ ಆಯೋಜಿಸಿದ್ದ ಗೋಂಧಳಿ ಸಮಾಜದ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಂಡರು
ಕೂಡಲಸಂಗಮದಲ್ಲಿ ಭಾನುವಾರ ಆಯೋಜಿಸಿದ್ದ ಗೋಂಧಳಿ ಸಮಾಜದ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಂಡರು   

ಕೂಡಲಸಂಗಮ: ಅಲೆಮಾರಿ ಜನಾಂಗದವರು ಒಂದೆಡೆ ನೆಲೆ ನಿಲ್ಲುವಂತೆ ಮಾಡಲು, ತಾಲ್ಲೂಕು ಕೇಂದ್ರಗಳಲ್ಲಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಹಾಗೂ ಹಣಕಾಸಿನ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಗೋಂಧಳಿ ಸಮಾಜದಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಒಂದೇ ಪ್ರದೇಶದಲ್ಲಿ ನೆಲೆ ನಿಲ್ಲದ ಕಾರಣ ಅಲೆಮಾರಿಗಳು ನಾಗರಿಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಂತೆ ಅವರಿಗೂ ಜಮೀನು ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಮಗು ಅತ್ತರೆ ಮಾತ್ರ ತಾಯಿ ಹಾಲು ಕುಡಿಸುತ್ತಾಳೆ. ಬಾಯಿ ಇದ್ದವನು ಬರಗಾಲದಲ್ಲೂ ಗೆದ್ದ ಎಂಬ ಗಾದೆ ಮಾತಿದೆ. ಬಾಯಿ ಇಲ್ಲದ ನೀವು ಇಲ್ಲಿಯವರೆಗೂ ಸರ್ಕಾರದ ಬಳಿ ಏನನ್ನೂ ಕೇಳಿಲ್ಲ. ಕೇಳುವ ಗಟ್ಟಿ ಧ್ವನಿಯೂ ನಿಮ್ಮಲ್ಲಿಲ್ಲ. ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಗೋಂಧಳಿ ಸಮಾಜದ ವತಿಯಿಂದ ಶಿಕ್ಷಣ ಸಂಸ್ಥೆ ಇಲ್ಲವೇ ವಸತಿ ನಿಲಯ ಸ್ಥಾಪಿಸಲು ಮುಂದಾದರೆ ಸರ್ಕಾರದಿಂದ ನಿವೇಶನ ಹಾಗೂ ಆರ್ಥಿಕ ನೆರವು ಕಲ್ಪಿಸಲಾಗುವುದು ಎದರು. ‘ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಹಾಗೆಂದು ‘ಅಹಿಂದ’ ಪರ ಮಾತ್ರ ಎಂಬ ಹಣೆಪಟ್ಟಿ ಸಲ್ಲ. ನಾವು ಎಲ್ಲ ಜಾತಿಯ ಬಡವರ ಪರವಾಗಿಯೂ ಇದ್ದೇವೆ’ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ದ್ವೇಷ ಹರಡಿ ಅಧಿಕಾರ ಸಾಧ್ಯವಿಲ್ಲ: ‘ಶರಣರು, ಸೂಫಿಗಳು, ಸಂತರು, ದಾಸರು ಬದುಕಿ ಬಾಳಿದ ಈ ನೆಲದಲ್ಲಿ ಸಾಮರಸ್ಯ ನೆಲೆಗೊಂಡಿದೆ. ಇಲ್ಲಿ ಜಾತಿ–ಧರ್ಮಗಳ ನಡುವೆ ಬೆಂಕಿ ಹಚ್ಚಿ, ದ್ವೇಷ ಹುಟ್ಟಿಸಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ರಾಜ್ಯದ ಜನತೆ ಅದಕ್ಕೆ ಸೊಪ್ಪು ಹಾಕುವುದಿಲ್ಲ’ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು.
ರಾಜ್ಯಮಟ್ಟದಲ್ಲಿ ಅಲೆಮಾರಿಗಳ ಮೊದಲ ಸಮ್ಮಿಲನ ಎಂದು ಹೇಳಲಾದ ಈ ಸಮಾವೇಶದಲ್ಲಿ ಗೋಂಧಳಿ, ಬುಡಬುಡಿಕೆ, ಜೋಶಿ, ಸೂರ್ಯವಂಶಿ, ಕೊಂಡೆ, ಗೋತ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.