ADVERTISEMENT

ಕೃಷ್ಣೆಗೆ ನೀರು ಬಿಡಲು ಆದೇಶ

ಹುನಗುಂದ ತಾಲ್ಲೂಕಿಗೆ 0.5 ಟಿಎಂಸಿ ಅಡಿ ನೀರು

​ಪ್ರಜಾವಾಣಿ ವಾರ್ತೆ
Published 30 ಮೇ 2016, 9:01 IST
Last Updated 30 ಮೇ 2016, 9:01 IST

ಬಾಗಲಕೋಟೆ: ಹುನಗುಂದ ತಾಲ್ಲೂಕಿ ನಲ್ಲಿ ಬಹುಗ್ರಾಮ ಯೋಜನೆಯ ವ್ಯಾಪ್ತಿ ಯಡಿ ಬರುವ 70 ಗ್ರಾಮಗಳಿಗೆ ಕುಡಿ ಯುವ ನೀರು ಪೂರೈಸಲು ಇದೇ 30 ರಂದು ಸಂಜೆ 5 ಗಂಟೆಗೆ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ 0.5 ಟಿಎಂಸಿ ಅಡಿ ನೀರು ಹರಿಸಲು     ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎನ್.ಜಯರಾಂ ಆದೇಶಿಸಿದ್ದಾರೆ.

ನಾರಾಯಣಪುರ ಜಲಾಶಯ ಸಂಪೂರ್ಣವಾಗಿ ಬತ್ತಿದೆ. ಇದರಿಂದ ಹುನಗುಂದ ತಾಲ್ಲೂಕಿನ ಇಸ್ಲಾಂಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬರುವ 60 ಗ್ರಾಮಗಳು ಹಾಗೂ ಇದ್ದಲಗಿ ಸೇರಿದಂತೆ ಸುತ್ತಲಿನ 10 ಗ್ರಾಮಗಳಲ್ಲಿ ಜನ–ಜಾನುವಾರು ಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ.

ಹಾಗಾಗಿಕೃಷ್ಣಾ ನದಿ ಮೂಲಕ ನಾರಾಯಣಪುರ ಜಲಾ ಶಯಕ್ಕೆ ತುರ್ತಾಗಿ ನೀರು ಹರಿಸುವಂತೆ ಬಾಗಲಕೋಟೆ ಜಿಲ್ಲಾಧಿಕಾರಿ ನೀಡಿದ ವರದಿ ಆಧರಿಸಿ ಪ್ರಾದೇಶಿಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.

ವರದಿ ಸಲ್ಲಿಕೆಗೆ ಸೂಚನೆ: ಹುನಗುಂದ ತಾಲ್ಲೂಕಿನ ನೀರಿನ ಬವಣೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಪ್ರಾದೇಶಿಕ ಆಯುಕ್ತರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ ನಂತರ ವಸ್ತುಸ್ಥಿತಿಯ ವರದಿ ನೀಡುವಂತೆ ಜಿಲ್ಲಾ ಧಿಕಾರಿಗೆ ಆಯುಕ್ತರು ಸೂಚನೆ ನೀಡಿ ದ್ದರು. ಅದರಂತೆ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಭಾನುವಾರ ವರದಿ ನೀಡಿದ್ದರು.

ಷರತ್ತುಗಳು ಅನ್ವಯ: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ   ಬಿಡುವ ನೀರನ್ನು ಜನ–ಜಾನುವಾರುಗಳಿಗೆ ಕುಡಿ ಯಲು ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ನೀರು ನಿಗದಿತ ಸ್ಥಳ ತಲುಪುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿ ಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಜೊತೆಗೆ ಜಲಾಶಯ ದಿಂದ ಬಿಡುಗಡೆಯಾದ ನೀರು ಉದ್ದೇ ಶಿತ ಕಾರ್ಯಕ್ಕೆ ಮಾತ್ರ ಬಳಕೆಯಾಗು ವಂತೆ ನಿಗಾ ಇಡಲು ಕಂದಾಯ, ಪೊಲೀಸ್, ನೀರಾವರಿ ಹಾಗೂ ಸ್ಥಳೀಯ ಸಂಸ್ಥೆಗಳ ಒಂದು ಕಾರ್ಯಪಡೆ ರಚಿಸು ವಂತೆ ಪ್ರಾದೇಶಿಕ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಅಗತ್ಯವಿದ್ದಲ್ಲಿ 144 ಸೆಕ್ಷನ್‌ ಜಾರಿಗೊಳಿಸಿ:
ಜಲಾಶಯದಿಂದ ನದಿಗೆ ನೀರು ಬಿಡುವ ಅವಧಿಯಲ್ಲಿ ಕೃಷ್ಣಾ ನದಿ ವ್ಯಾಪ್ತಿಯಲ್ಲಿನ ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಿದ ವಿದ್ಯುತ್ ಸಂಪರ್ಕ ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿರುವ ಪ್ರಾದೇಶಿಕ ಆಯುಕ್ತರು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಗತ್ಯವಿದ್ದಲ್ಲಿ 144 ಸೆಕ್ಷನ್ ಜಾರಿಗೊಳಿಸಲು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.