ADVERTISEMENT

ಕೆಳಭಾಗದ ರೈತರಿಗೆ ದೊರೆಯದ ನೀರು!

ಸಸಾಲಟ್ಟಿ ಏತ ನೀರಾವಾರಿ ಯೋಜನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:41 IST
Last Updated 3 ಫೆಬ್ರುವರಿ 2017, 6:41 IST
ಕೆಳಭಾಗದ ರೈತರಿಗೆ ದೊರೆಯದ ನೀರು!
ಕೆಳಭಾಗದ ರೈತರಿಗೆ ದೊರೆಯದ ನೀರು!   

ಮಹಾಲಿಂಗಪುರ: ಘಟಪ್ರಭಾ ಎಡ ದಂಡೆ ಕಾಲುವೆಯ ನೀರು ರೈತರ ಕೃಷಿ ಭೂಮಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಸಾಲಟ್ಟಿ ಏತ ನೀರಾ ವರಿ ಯೋಜನೆಯನ್ನು ಶೀಘ್ರ ಕೈಗೆತ್ತಿ ಕೊಳ್ಳಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆಗ್ರಹಿಸಿದರು.

ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿ ಸಸಾಲಟ್ಟಿ ಏತ ನೀರಾವರಿ ಯೋಜನೆ ಜಾರಿಗಾಗಿ ರೈತರು ಮತ್ತು ವಿವಿಧ ಸಂಘಟನೆಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿ ಮಾತನಾಡಿದರು.

ಮುಧೋಳ, ಜಮಖಂಡಿ ಹಾಗೂ ಬೀಳಗಿ ತಾಲ್ಲೂಕುಗಳ ಕೃಷಿ ಹಾಗೂ ಕುಡಿಯುವ ನೀರಿನ ಸಮರ್ಪಕ ಪೂರೈಕೆ ಗಾಗಿ ಯೋಜನೆ ಅನುಷ್ಠಾನ ತುರ್ತು ಅಗತ್ಯವಿದೆ. ಜನರ ಸಮಸ್ಯೆಗೆ ಸ್ಪಂದಿಸಿ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳದಿರು ವುದು ದೌರ್ಭಾಗ್ಯದ ಸಂಗತಿ ಎಂದರು.

ಘಟಪ್ರಭೆಯ ನೀರು ಕ್ಷೇತ್ರದ ತುದಿ ಯಲ್ಲಿರುವ ರೈತರಿಗೆ ಮುಟ್ಟದೆ ಅನ್ಯಾಯ ವಾಗುತ್ತಿದ್ದು  ಪೂರಕ ಯೋಜನೆಯಾದ ಕೃಷ್ಣಾನದಿಯ ನೀರನ್ನು ಎತ್ತಿ ಜಿಎಲ್‌ಬಿಸಿ ಕಾಲುವೆಯ ಮೂಲಕ ಹರಿಸುವ ವ್ಯವಸ್ಥೆ ಯಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಮಾತನಾಡಿ, ‘ಆಲ ಮಟ್ಟಿ ನೀರಾವರಿ ಯೋಜನೆಯಿಂದ ಜಿಲ್ಲೆಯ ರೈತರು ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿರುವುದೇ ಹೆಚ್ಚು. ಇದರಿಂದ ರೈತರು ಊರು, ಮಠ, ಮನೆ ಕಳೆದುಕೊಂಡು ಬೇರೊಬ್ಬರ ಹತ್ತಿರ ಕೂಲಿ ಮಾಡುವ ಪರಿಸ್ಥಿತಿ ಬಂದೊದ ಗಿದೆ’ ಎಂದು ವಿಷಾದಿಸಿದರು.

ಮಾಜಿ ಶಾಸಕ ಸಿದ್ದು ಸವದಿ, ರೈತ ಸಂಘದ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿದರು. 35ಕ್ಕೂ ಹೆಚ್ಚು ಅಟೊಗಳ ರ್‍್ಯಾಲಿ ನಡೆಯಿತು. ಬಸನಗೌಡ ಪಾಟೀಲ, ಅಶೋಕ ಗೌಡ ಪಾಟೀಲ, ಮಹಾಂತೇಶ ಹಿಟ್ಟಿನ ಮಠ, ಮನೋಹರ ಶಿರೋಳ, ಅಶೋಕ ಅಂಗಡಿ, ಅರ್ಜುನಗೌಡ ಪಾಟೀಲ, ಮಹಾಂತೇಶ ತಾಳಿಕೋಟಿ, ಸೈಯದ್‌ ಬರಗಿ, ಇಸೂಫ್ ಪೆಂಡಾರಿ, ಕಾಮೇಶ ಸಪ್ತಸಾಗರ, ಶಂಕರ ಮಾದರ, ಆನಂದ ಖೋತ, ಅಜೇಯ ಹಂದ್ರಾಳ, ಜಮೀರ ಯಕ್ಷಂಬಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.