ADVERTISEMENT

ಕ್ಯಾನ್ಸರ್‌: ಸಾರ್ವಜನಿಕ ಜಾಗೃತಿ ಜಾಥಾ ನಾಳೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:42 IST
Last Updated 3 ಫೆಬ್ರುವರಿ 2017, 6:42 IST
ಕ್ಯಾನ್ಸರ್‌: ಸಾರ್ವಜನಿಕ ಜಾಗೃತಿ ಜಾಥಾ ನಾಳೆ
ಕ್ಯಾನ್ಸರ್‌: ಸಾರ್ವಜನಿಕ ಜಾಗೃತಿ ಜಾಥಾ ನಾಳೆ   

ಬಾಗಲಕೋಟೆ: ಕ್ಯಾನ್ಸರ್‌ ರೋಗ ಬಂದರೆ ಸಾವು ಖಚಿತ ಎಂಬುದು ತಪ್ಪು ತಿಳಿವಳಿಕೆ. ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಾವು ತಪ್ಪಿಸುವ ಜೊತೆಗೆ ರೋಗದಿಂದ ಗುಣಮುಖರಾಗಲು ಸಾಧ್ಯ ಎಂದು ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾ. ಬಿ.ಎಚ್. ಕೆರೂಡಿ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕ್ಯಾನ್ಸರ್ ರೋಗದಿಂದ ದೇಶದಲ್ಲಿ ಪ್ರತಿ ವರ್ಷ 7ರಿಂದ 8 ಲಕ್ಷ ಜನ ಸಾವನ್ನ ಪ್ಪುತ್ತಿದ್ದಾರೆ, ಅದರಂತೆ ಪ್ರಪಂಚದಲ್ಲಿ 90 ದಶಲಕ್ಷ ಜನ ಜೀವ ಕಳೆದುಕೊಳ್ಳುತ್ತಿ ದ್ದಾರೆ. ಇದಕ್ಕೆಲ್ಲಾ ಜಾಗೃತಿಯ ಕೊರತೆ ಕಾರಣ ಎಂದು ಹೇಳಿದರು.

ಅತ್ಯುತ್ತಮ ಚಿಕಿತ್ಸೆಯಿಂದ ಕ್ಯಾನ್ಸರ್‌ ಕಾಯಿಲೆಯನ್ನು ವಾಸಿ ಮಾಡಬಹುದು ಎಂಬ ಜಾಗೃತಿ ಸಾರ್ವಜನಿಕರಲ್ಲಿ ಬರ ಬೇಕಿದೆ. ಹಾಗಾಗಿ ಇದೇ 4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ವಿದ್ಯಾಗಿರಿ ಸರ್ಕಲ್‌ನಿಂದ ಜಿಲ್ಲಾ ಆಸ್ಪತ್ರೆವರೆಗೆ ಜಾಥಾ ಸಂಘಟಿಸಲಾಗಿದೆ. ಅದರಲ್ಲಿ ಕೆರೂಡಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗವಿದೆ ಎಂದು  ಹೇಳಿದರು.
ಕ್ಯಾನ್ಸರ್ ರೋಗ ಚಿಕಿತ್ಸೆಗೆ ಮೀರಿದ್ದು, ಅಥವಾ ಕ್ಯಾನ್ಸರ್ ಬಂದವರು ಬದುಕು ಕಷ್ಟ- ಸಾಧ್ಯ ಎಂಬಂತಹ ಅಂಧಶ್ರದ್ಧೆ ಜನರ ಮನಸ್ಸಲ್ಲಿದೆ. ಅದನ್ನು ನಿವಾರಿಸಿ ಜನರಲ್ಲಿ ಜಾಗೃತಿ ಉಂಟು ಮಾಡಲು ಜಾಥಾ ನೆರವಾಗಲಿದೆ ಎಂದರು.

ಜಾಥಾ ಮುಗಿದ ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಸಂತೋಷ ಈಜೇರಿ, ಡಾ.ರಾಘವೇಂದ್ರ ಸಾಗರ, ಡಾ.ಈರಪ್ಪ ಮದಭಾವಿ ಪಾಲ್ಗೊಂಡು ರೋಗಿಗಳನ್ನು ಪರೀಕ್ಷಿಸಿ ಸಲಹೆ–ಸೂಚನೆಗಳನ್ನು ನೀಡಲಿದ್ದಾರೆ ಎಂದರು.
ಯಶಸ್ವಿನಿ, ವಾಜಪೇಯಿ ಆರೋಗ್ರಶ್ರೀ, ಜ್ಯೋತಿ ಸಂಜೀವಿನಿ, ರಾಜೀವ ಆರೋಗ್ಯ ಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಡಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಡಾ.ಸಂತೋಷ ಇಜೇರಿ, ಡಾ.ರಾಘ ವೇಂದ್ರ ಸಾಗರ, ಡಾ.ಶಿವಕುಮಾರ, ಡಾ.ಈರಪ್ಪ ಮದಬಾವಿ, ಡಾ.ಸುರೇಶ ಉಳ್ಳಾಗಡ್ಡಿ, ಡಾ. ಶಂಕರಗೌಡ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.