ADVERTISEMENT

‘ಗುರುಕುಲ ಪದ್ಧತಿ ಇಂದಿಗೂ ಪ್ರಸ್ತುತ’

ವಿಶ್ವಕ್ಕೆ ಮಾದರಿಯಾಗಿದ್ದ ಭಾರತೀಯ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 10:37 IST
Last Updated 28 ಜನವರಿ 2017, 10:37 IST
‘ಗುರುಕುಲ ಪದ್ಧತಿ ಇಂದಿಗೂ ಪ್ರಸ್ತುತ’
‘ಗುರುಕುಲ ಪದ್ಧತಿ ಇಂದಿಗೂ ಪ್ರಸ್ತುತ’   

ಮಹಾಲಿಂಗಪುರ: ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಗಳಲ್ಲಿ ಒಂದಾದ ಗುರುಕುಲ ಮಾದರಿ ಉತ್ತಮ ಸಮಾಜ ನಿರ್ಮಿಸುವ ನಾಗರಿಕರನ್ನು ತಯಾರು ಮಾಡುತ್ತದೆ, ಜಗತ್ತು ಎಷ್ಟೇ ಮುಂದುವರೆದರೂ ಗುರುಕುಲ ಪದ್ಧತಿಯ ಶಿಕ್ಷಣ ಮಾದರಿ  ಇಂದಿಗೂ ಪ್ರಸ್ತುತವಾಗಿದೆ ಎಂದು ಹೆಸ್ಕಾಂ ಸಹಾಯಕ ಎಂಜಿನಿಯರ್‌ ಮಂಜುನಾಥ ಬೋಕಿ ಹೇಳಿದರು.

ಸಮೀಪದ ಜ್ಞಾನ ಗುರುಕುಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಗುರುಕುಲ ಸಂಭ್ರಮ 2017ಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವದ­ಲ್ಲಿಯೇ ಹೆಸರು ಮಾಡಿದ್ದ ಕೆಲವೇ ವಿಶ್ವ ವಿದ್ಯಾಲಯಗಳಲ್ಲಿ ಭಾರತದ ನಾಲಂದಾ ಹಾಗೂ ಸಾಲೋ­ಟಗಿಯ ವಿಶ್ವ­ವಿದ್ಯಾ­ಲಯ­ಗಳು ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿದ್ದವು ಎಂದು  ಹೇಳಿದರು.

ಪುರಸಭೆಯ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಮಾತನಾಡಿ ಜ್ಞಾನ ಗುರುಕುಲ ಶಾಲೆ ಸತತ 20 ವರ್ಷಗಳಿಂದ ಉತ್ತಮ ಸಾಧನೆ ಮಾಡಿ ಗ್ರಾಮೀಣ ಮಕ್ಕಳ ಬಾಳಿಗೆ ಬೆಳಕಾಗಿದೆ, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಇಲ್ಲಿ ನೀಡುವ ಶಿಕ್ಷಣದಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಿದೆ ಎಂದರು.

ಸಂಸ್ಥೆಯ ಸಂಸ್ಥಾಪಕ ಎಂ.ಎಸ್. ತೆಗ್ಗಿನಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಮುಖ್ಯಾಧಿ­ಕಾರಿ ಈರಣ್ಣ ದಡ್ಡಿ ಮಾತನಾಡಿದರು. ಆಂಗ್ಲ ಮಾಧ್ಯಮ ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ ಖವಾಸಿ, ಪ್ರಾಥ­ಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೈಲಜಾ ಗುರವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೃಪ್ತಿ ಕಟ್ಟಿ ಪ್ರಾರ್ಥಿಸಿದರು, ಹರ್ಷಿತಾ ಉತ್ತಂಗಿ ಸ್ವಾಗತಿಸಿದರು, ಅಜೇಯ ಕಡೆಮನಿ ವಂದಿಸಿದರು, ಅಲ್ಲಾಭಕ್ಷ ಮೊಖಾಸಿ ಮತ್ತು ಗಜಾನನ ನಾಯ್ಕ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.