ADVERTISEMENT

ಚಿತ್ತರಗಿ ಮಠದ ಪರಂಪರೆ ದೊಡ್ಡದು’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:01 IST
Last Updated 9 ನವೆಂಬರ್ 2017, 5:01 IST

ಅಮೀನಗಡ: ಚಿತ್ತರಗಿ ವಿಜಯ ಮಹಾಂತೇಶ್ವರ ಮಠವು ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದು. ಇದರ ಪರಂಪರೆ ದೊಡ್ಡದು. ನಾಡಿನುದ್ದಕ್ಕೂ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ಇದಕ್ಕೆ ಕಾರಣರು ಲಿಂ.ವಿಜಯ ಮಹಾಂತ ಶಿವಯೋಗಿಗಳು ಎಂದು ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಹಾಲಕೇರಿ ಮತ್ತು ಹೊಸಪೇಟೆಯ ಕೊಟ್ಟೂರೇಶ್ವರ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಚಿತ್ತರಗಿಯ ಲಿಂ.ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಂಗಮ ದಾಸೋಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿಯೂ ತತ್ವಜ್ಞಾನಗಳ ಆಗರವಾಗಿರುವ ಮಠಗಳು ತಮ್ಮ ಆಧ್ಯಾತ್ಮಿಕ ನಿಲುವುಗಳಿಂದ ಸಮಾಜ ಸುಧಾರಣೆ ಮತ್ತು ಸಾತ್ವಿಕತೆ ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.

ಬಸವ ತತ್ವ ನಿಷ್ಠರಾದ ಮಹಾಂತಶ್ರೀಗಳು ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಯುವಕರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ದು ಬಸವ ತತ್ವನ್ನು ಪಸರಿಸಿ ಈ ಭಾಗದ ನಡೆದಾಡುವ ದೇವರಾಗಿದ್ದಾರೆ ಎಂದರು.

ADVERTISEMENT

ಕಮತಗಿಯ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಶ್ರೀಗಳು ಮಾತನಾಡಿ, ಶರಣರು, ಸಂತರು, ನಡೆದು ಬಂದ ನಮ್ಮ ಸಂಸ್ಕೃತಿ ಉಳಿಸಬೇಕು. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಯುವಕರಲ್ಲಿ ಸಂಸ್ಕೃತಿ, ಆಚಾರ, ವಿಚಾರ, ಗುರು ಹಿರಿಯರ ಮೇಲಿನ ಭಕ್ತಿ ನಸಿಸುತ್ತಿದೆ. ಇಂತಹ ಪುರಾಣ ಪ್ರವಚನ ಆಲಿಸಿದಾಗ ಮಾತ್ರ ಧರ್ಮದ ಜಾಗೃತಿ ಸಾಧ್ಯ ಎಂದರು.

ಡಾ.ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹರನಾಳದ ಸಂಗನಬಸವ ಶ್ರೀಗಳು, ಹಡಗಲಿ ರುದ್ರಮುನಿ ಶ್ರೀಗಳು, ತಿಕೋಟಾದ ಚನ್ನಮಲ್ಲಿಕಾರ್ಜುನ ಶ್ರೀಗಳು, ಶಿರೂರಿನ ಮಹಾಂತ ತೀರ್ಥದ ಬಸವಲಿಂಗ ಶ್ರೀಗಳು, ಬಸವರಾಜ ದೇವರು, ಪ್ರವಚನಕಾರ ಬೆಳ್ಳೇರಿ ಶಿವಾನಂದ ಮಠದ ಬಸವಾನಂದ ಶ್ರೀಗಳು, ಜಾತ್ರಾ ಮಹೋತ್ಸವದ ಅಧ್ಯಕ್ಷ ಗಂಗಾಧರ ಶಾಸ್ತ್ರಿ ಹಿರೇಮಠ ಇದ್ದರು. ಗಣೇಶ ರಾಯಭಾಗಿ ಅವರಿಂದ ಸಂಗೀತ ಸೇವೆ ನಡೆಯಿತು. ಎಸ್.ಎನ್.ನಿಂಗನಗೌಡ್ರ ಸ್ವಾಗತಿಸಿದರು, ಬಸನಗೌಡ ಬೇವೂರ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.