ADVERTISEMENT

‘ಜಗಲಿ ನೇಮಕ ಕೇವಲ ವದಂತಿ, ನಾನೇ ಅಧ್ಯಕ್ಷ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 7:48 IST
Last Updated 15 ಏಪ್ರಿಲ್ 2017, 7:48 IST

ಬಾಗಲಕೋಟೆ: ‘ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ನಿವೃತ್ತ ಡಿವೈಎಸ್ಪಿ ವಿ.ಪಿ.ಜಗಲಿ ಅವರ ನೇಮಕ ಕೇವಲ ವದಂತಿ. ಆ ಸ್ಥಾನದಲ್ಲಿ ನಾನೇ ಮುಂದುವರಿ ದಿರುವೆ’ ಎಂದು ಸಂಘದ ಹಾಲಿ ಅಧ್ಯಕ್ಷ ಡಿ.ಬಿ.ಸಿದ್ದಾಪುರ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರ ಬದಲಾವಣೆಯಾಗಿದೆ ಎಂದು ಮಾಧ್ಯಮದಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಸ್ಪಷ್ಟೆ ನೀಡಿದ ಅವರು,
ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳ ಅಧ್ಯಕ್ಷರು, ಉಪಾ ಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಸಮ್ಮುಖದಲ್ಲಿ ಎರಡು ವರ್ಷಗಳ ಹಿಂದೆ ಆಯ್ಕೆಯಾಗಿದ್ದೇನೆ.

ಅಂದಿನ ಸಭೆಯಲ್ಲಿ ಠರಾವು ಮಾಡಿ ಕರ್ನಾಟಕ ಪ್ರದೇಶ ಕುರು ಬರ ಸಂಘಕ್ಕೆ ಪದಾಧಿಕಾರಿಗಳ ಪಟ್ಟಿ ಕಳುಹಿಸಿ ಅಲ್ಲಿಂದ ಅಧಿಕೃತವಾಗಿ ಅನುಮೋದನೆ ಪಡೆದು ಕೊಳ್ಳ ಲಾಗಿದೆ. ಜಿಲ್ಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದರು.

ADVERTISEMENT

ನಿವೃತ್ತ ಡಿವೈಎಸ್ಪಿ ಆಗಿರುವ ವಿ.ಪಿ.ಜಗಲಿ  ತಮ್ಮ ಅಧಿಕಾರದ ಅವಧಿಯಲ್ಲಿ ದಕ್ಷ ಅಧಿಕಾರಿಯಾಗಿದ್ದವರು. ಆದರೆ ಸಮುದಾಯಕ್ಕೆ ಅವರ ಕೊಡುಗೆ ಏನು ಇಲ್ಲ. ಬಾಗಲಕೋಟೆ ಜಿಲ್ಲಾ ಕುರುಬರ ಸಂಘಕ್ಕೆ ಅವರು ಯೋಗ್ಯವಾದ ವ್ಯಕ್ತಿಯಲ್ಲ. ಸಮುದಾಯ ಹಾಗೂ ಸಂಘದ ಹಿತಾಸಕ್ತಿ ಕಾಪಾಡುವಲ್ಲಿ ಅವರ ಪಾತ್ರ ಏನೂ ಇಲ್ಲ ಎಂದರು.

‘ಜಗಲಿ ಅವರ ನೇಮಕದ ಬಗ್ಗೆ ರಾಜ್ಯ ಕುರುಬರ ಸಂಘವನ್ನು ಸಂಪರ್ಕಿಸಿದಾಗ ಅವರಿಗೆ ಯಾವುದೇ ಮಾಹಿತಿಯೇ ಇಲ್ಲ. ಅಧ್ಯಕ್ಷರಾಗಿ ನೀವೇ ಮುಂದುವರೆಯಿರಿ, ನಿಮ್ಮನ್ನು ಬದಲಾವಣೆ ಮಾಡುವ ಪ್ರಸಂಗವೇ ಇಲ್ಲ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮುಖಂಡರಾದ ವೀರಣ್ಣ ಹಳೇಗೌಡ್ರ ಹಾಗೂ ಸಂಗಪ್ಪ ಕಂದಗಲ್ ಮಾತನಾಡಿ, ಡಿ.ಬಿ. ಸಿದ್ದಾಪುರ ಅವರು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಏಳಿಗೆ ಸಹಿಸದೇ ಕೆಲವರು ಅವರನ್ನು ತುಳಿಯಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಖಜಾಂಜಿ ಆತ್ಮಾನಂದ ಜಾಲಿಹಾಳ, ರಂಗಪ್ಪ ಸುಣಗದ, ನಾಗಪ್ಪ, ಸಂಗಪ್ಪ ಗಾಳಿ, ಶಿವಣ್ಣ ಹನಮಕ್ಕನವರ, ಸಿದ್ದಣ್ಣ ರಾಜೂರ, ಮಂಜು ಕುರುಬರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.