ADVERTISEMENT

‘ಬಡವರ ಪರ ಕಾಂಗ್ರೆಸ್ ಸರ್ಕಾರ ಕಾರ್ಯ’

ಪಶು ಪಾಲನೆ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:56 IST
Last Updated 25 ಮೇ 2017, 9:56 IST

ರಬಕವಿ ಬನಹಟ್ಟಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೆಸ್‌ ಸರ್ಕಾರ ತುಳಿತಕ್ಕ ಒಳಗಾದ ಸಮುದಾಯದ ಪರವಾಗಿ ರುವ ಸರ್ಕಾರ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ತಿಳಿಸಿದರು.

ಅವರು ಬುಧವಾರ ರಬಕವಿ ಬನಹಟ್ಟಿ ನಗರಭೆ ಕಾರ್ಯಾಲಯದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಯೋಜನೆ ಅಡಿಯಲ್ಲಿ ವಿವಿಧ ಘಟಕಗಳ ಪಲಾನುಭವಿಗಳಿಗೆ ಚೆಕ್‌ ವಿತರಣೆ ಮಾಡಿ ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಶು ಪಾಲನೆ ಮತ್ತು ಪಶು ವೈದ್ಯಸೇವಾ ವಿಭಾಗದಲ್ಲಿ ಹಲವಾರು ಸುಧಾರಣೆ ಜಾರಿಗೆ ತಂದಿದೆ. ವಿಶೇಷ ಘಟಕ ಯೋಜನೆ, ಪಶು ಭಾಗ್ಯ ಹೈನು ಗಾರಿಕೆ ಯೋಜನೆ, ಮಹಿಳೆಯರಿಗಾಗಿ ಅಮೃತ ಯೋಜನೆ, ಆರ್‌ಕೆವಿವೈ ಯೋಜನೆ ಮತ್ತು ದೇವದಾಸಿ ಮತ್ತು ನಿರಾಶ್ರಿತ ಮಹಿಳೆಯರೂ ಕೂಡಾ ಆರ್ಥಿಕವಾಗಿ ಸ್ವಾವಲಂಬನೆ ಹೊಂದು ವುದರ ಅನೇಕ ಕಾರ್ಯಕ್ರಮ ಹಾಕಿ ಕೊಂಡಿದೆ.

ಸದ್ಯ ಈ ಯೋಜನೆ ಅಡಿ ಯಲ್ಲಿ ಒಟ್ಟು 73 ಫಲಾನುಭವಿಗಳಿಗೆ 50 ಲಕ್ಷ 44 ಸಾವಿರ ಮೊತ್ತದ ಚೆಕ್‌ ವಿತರಣೆ ಯನ್ನು ಮಾಡಲಾಗುವುದು ಎಂದರು. ಇಲ್ಲಿ ಲಿಂಗ ತಾರತಮ್ಯ ಮಾಡದೆ, ಜಾತಿ, ಧರ್ಮ, ಮತ ಬೇಧ ಮರೆತು ಎಲ್ಲ ರೀತಿಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

ರಬಕವಿ–ಬನಹಟ್ಟಿ ನಗರಸಭೆ ಪೌರಾಯುಕ್ತ ಆರ್‌.ಎಂ.ಕೊಡಗೆ, ಅಧ್ಯಕ್ಷೆ ರಮೀಜಾ ಝಾರೆ, ಉಪಾಧ್ಯಕ್ಷ ಸಂಜಯ ಜೀರಗಾಳ, ಪಶುಭಾಗ್ಯ ಆಯ್ಕೆ ಸಮಿತಿ ಸದಸ್ಯ ಬಸವರಾಜ ದೊಡ್ಡಮನಿ  ಇದ್ದರು.

ಪಶು ಇಲಾಖೆಯ ಅಧಿಕಾರಿಗಳಾದ ಡಾ.ಶಿವಕುಮಾರ ಹೊಳೆಪ್ಪಗೊಳ, ಡಾ.ಬಿ.ಬಿ.ಬೆಳಕಿಂಡಿ, ಡಾ.ಪ್ರಕಾಶ ಗೂಳಪ್ಪಗೋಳ, ಡಾ.ಚನ್ನಪ್ಪ ನಿಂಬಾಳ, ಡಾ. ಅಶೋಕ ದಳೇಜ, ಆರ್‌.ಎಸ್‌. ದೊಡ್ಡಮನಿ, ಎಸ್‌.ಡಿ. ಬಟಕುರ್ಕಿ ಮತ್ತು ವೈ.ಬಿ.ದ್ಯಾವನ್ನವರ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.