ADVERTISEMENT

ಬನಹಟ್ಟಿ: ತರಹೇವಾರಿ ಕಾಮಣ್ಣ ವಿಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 7:13 IST
Last Updated 6 ಮಾರ್ಚ್ 2015, 7:13 IST
ರಬಕವಿಯ ಈಶ್ವರ ಸಣಕಲ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾಮಣ್ಣ
ರಬಕವಿಯ ಈಶ್ವರ ಸಣಕಲ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾಮಣ್ಣ   

ಬನಹಟ್ಟಿ: ರಬಕವಿ–ಬನಹಟ್ಟಿ ಅವಳಿ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಕಾಮಣ್ಣನ ವಿಗ್ರಹಗಳು ವೈವಿಧ್ಯಮಯವಾಗಿದ್ದು, ಹಲವು ದೃಷ್ಟಿಯಿಂದ ಗಮನ ಸೆಳೆಯುತ್ತಿವೆ.

ಈಶ್ವರ ಸಣಕಲ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕಾಮಣ್ಣನ ಮೂರ್ತಿ ಜುಬ್ಬಾ ತೊಟ್ಟು ತಂಪು ಕನ್ನಡಕ ಧರಿಸಿದ್ದರೆ, ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ಕಾಮಣ್ಣ ಶ್ವೇತ ವಸ್ತ್ರಧಾರಿ. ಜೊತೆಗೆ ದಿನಪತ್ರಿಕೆ ಓದಲು ಅಣಿಯಾಗಿದ್ದಾನೆ.

ಶಂಕರಲಿಂಗ ದೇವಸ್ಥಾನದ ಹತ್ತಿರದ ಕಾಮಣ್ಣ ದೊಡ್ಡದಾದ ಛತ್ರಿಯ ನೆರಳಿನಲ್ಲಿ ಕುಳಿತಿದ್ದರೆ, ಬನಹಟ್ಟಿಯ ಸೋಮವಾರಪೇಟೆ ದೈವ ಮಂಡಳಿ ಸ್ಥಾಪಿಸಿರುವ ಕಾಮಣ್ಣ ಕೈಯಲ್ಲಿ ಗಿಳಿ ಹಿಡಿದು ಕುಳಿತಿರುವುದು ವಿಶೇಷ.

ಬುಧವಾರ ಮೆರವಣಿಗೆ ಮೂಲಕ ತಂದ ಈ ಕಾಮಣ್ಣನ ವಿಗ್ರಹಗಳನ್ನು, ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಗಿದೆ. ಕೆಲವರು ಕಾಮಣ್ಣನನ್ನು ತರುವಾಗಲೇ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ್ದರು ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.