ADVERTISEMENT

ಮೋದಿ ಕೈ ಬಲಪಡಿಸಿ: ಸಂತೋಷ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 7:05 IST
Last Updated 18 ಜುಲೈ 2017, 7:05 IST

ಬಾಗಲಕೋಟೆ: ಇಲ್ಲಿನ ವಿವೇಕಾನಂದ ಬಡಾವಣೆಯಲ್ಲಿ ಸೋಮವಾರ ಪಂಡಿತ್ ದೀನದಯಾಳ ಉಪಾಧ್ಯಾಯರ 150ನೇ ಜನ್ಮ ದಿನಾಚರಣೆ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‌  ಚಾಲನೆ ನೀಡಿದರು.

‘ಪಂಡಿತ್ ದೀನದಯಾಳ ಅವರು ದೇಶದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ರಾಷ್ಟ್ರಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮೂಲಕ ದೇಶದ ಉನ್ನತಿಗೆ ಶ್ರಮಿಸಿದ್ದಾರೆ. ರೈತರು ಹಾಗೂ ಹಿಂದುಳಿದ ವರ್ಗದ ಉನ್ನತಿಗೆ  ಹೆಚ್ಚು ಗಮನ ನೀಡಿದ್ದರು’ ಎಂದರು.

ಸ್ವಚ್ಛ ಭಾರತ ಅಭಿಯಾನ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಣೆ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮ ರೂಪಿಸುವ ಮೂಲಕ ದೇಶ ಸೇವೆಯಲ್ಲಿ ತೊಡಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೆಚ್ಚಿನ ಸಹಕಾರ ನೀಡುವಂತೆ ಸಂತೋಷ್‌ ಮನವಿ ಮಾಡಿದರು.

ADVERTISEMENT

ಮಾಜಿ ಶಾಸಕ ವೀರಣ್ಣ ಚರಂತಿಮಠ,  ನಗರಸಭೆ ಸದಸ್ಯ ಮಹಾಂತೇಶ ಹಿರೇಮಠ, ಪಕ್ಷದ ನಗರ ಘಟಕದ ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ, ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಬಡಾವಣೆಯ ಮುಖಂಡರಾದ ಎ.ಜಿ.ಕೊಪ್ಪ, ಸಿ.ವಿ.ಕೋಟಿ, ರಾಮಣ್ಣ ಬಾರಕೇರ, ಶಿವಪುತ್ರಪ್ಪ ಕಿಣಗಿ, ಯಲ್ಲಪ್ಪ ಜಕಾತಿ, ಗುಂಡಪ್ಪ ಜ್ಯೋತೆಪ್ಪನವರ, ಸಿದ್ದಪ್ಪ ಲಾಯದಗುಂದಿ, ಮಹೇಶ ಸಿದ್ದಾಪುರ, ಪ್ರವೀಣ ಹೆಗಡಿಹಾಳ, ಸಂತೋಷ ಭೂಮಣ್ಣ, ಪ್ರಕಾಶ ಗೌಳಿ, ಚಂದ್ರಕಾಂತ ಕಂಕಣಮೇಲಿ, ರಾಜೇಶ ಸಂಗಾಪುರ, ಪಲ್ಲವಿ ಸಂಗಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.