ADVERTISEMENT

‘ಯೋಜನೆ ಯಶಸ್ಸಿಗೆ ನಾಗರಿಕರ ಪಾತ್ರ ಅಪಾರ’

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:32 IST
Last Updated 25 ಏಪ್ರಿಲ್ 2017, 6:32 IST

ಮಹಾಲಿಂಗಪುರ: ‘ಸರ್ಕಾರದ ಹಣ ನಮ್ಮದೇ ಹಣ ಎಂದು ತಿಳಿದು ಅದನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಬಳಸುವುದು ರಾಜ್ಯದ ಎಲ್ಲ  ನಾಗರಿಕರ ಕರ್ತವ್ಯವಾಗಬೇಕು, ಸರ್ಕಾರ ಕಾಲಕಾಲಕ್ಕೆ ಜಾರಿಗೆ ತರುವ ವಿವಿಧ ಯೋಜನೆಗಳ ಕುರಿತು ಸರಿಯಾದ ಮಾಹಿತಿ ಹೊಂದಿದಾಗ  ಸರ್ಕಾರದ ಯೋಜನೆಗಳು ಸಫಲತೆ ಹೊಂದಲು ಸಾಧ್ಯ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಭಿಪ್ರಾಯ ಪಟ್ಟರು.

ಮುಧೋಳ ರಾಜ್ಯ ಹೆದ್ದಾರಿಯಿಂದ ವಾಸವಿ ಕಲ್ಯಾಣ ಮಂಟಪದ ವರೆಗೆ ₹5.94ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.‘ಕಾಮಗಾರಿಗಳು ಕಳಪೆ ಮಟ್ಟದ್ದು ಎಂದು ಕಂಡು ಬಂದಲ್ಲಿ ಕೂಡಲೆ ಅಂಥ ಗುತ್ತಿಗೆದಾರರಿಗೆ ಬಿಲ್ ತಡೆಹಿಡಿಯಲಾಗುವುದು’ ಎಂದು ತಾಕೀತು ಮಾಡಿದರು.

ಸ್ಥಳೀಯ ಮಹಾತ್ಮಗಾಂಧಿ ವೃತ್ತದಲ್ಲಿ ಪುರಸಭೆ ನೂತನವಾಗಿ ₹ 38.6 ಲಕ್ಷದ ವೆಚ್ಚದಲ್ಲಿ ನಿರ್ಮಾಣ ಮಾಡಿದ 10 ಮಳಿಗೆಗಳು ಹಾಗೂ ಮಾರುಕಟ್ಟೆ    ರಸ್ತೆಯ ಪಶ್ಚಿಮ ಭಾಗದಲ್ಲಿ ನಿರ್ಮಾಣ ಮಾಡಿರುವ 3 ಮಳಿಗೆಗಳನ್ನು ಹಾಗೂ ಅಂಬೇಡ್ಕರ ವೃತ್ತದಿಂದ ಪೆಂಡಾರಿ ಗಲ್ಲಿಯವರೆಗೆ ₹ 10.1ಲಕ್ಷದ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಮಿಪೂಜೆಯನ್ನು ಉಮಾಶ್ರೀ ನೆರವೇರಿಸಿದರು. 

ADVERTISEMENT

ಪುರಸಭೆ ಅಧ್ಯಕ್ಷೆ ಶೋಭಾ ಪಾಟೀಲ, ಉಪಾಧ್ಯಕ್ಷೆ ಹನಮವ್ವ ಹಂದಿಗುಂದ, ಜಾವೇದ ಬಾಗವಾನ, ಯಲ್ಲನಗೌಡ ಪಾಟೀಲ, ನಜೀರ     ಅತ್ತಾರ, ಬಸವರಾಜ ರಾಯರ, ಸಂಗಪ್ಪ ಹಲ್ಲಿ, ಅರ್ಜುನ ದೊಡಮನಿ, ಹೊಳೆಪ್ಪ ಬಾಡಗಿ, ಬಲವಂತಗೌಡ ಪಾಟೀಲ, ಸುರೇಶ ಬಿದರಿ, ರವಿ ಬಿದರಿ, ಈಶ್ವರ ಚಮಕೇರಿ, ವಿಜುಗೌಡ ಪಾಟೀಲ, ವೆಂಕಣ್ಣ ಗುಂಡಾ, ಮನೋಹರ ಗುಂಡಾ, ಶ್ರೀಪಾದ ಗುಂಡಾ, ಸುಮಂಗಲಾ ಗುಂಡಾ, ಶ್ರೀನಿವಾಸ ಗುಂಡಾ, ಮುರಳಿ ಗುಂಡಾ, ರಾಣಿ ಗುಂಡಾ, ಅನೀಲ್ ಗುಂಡಾ, ಸುಧೀರ ಗುಂಡಾ, ಮಲ್ಲು ಕುಳ್ಳೋಳ್ಳಿ, ಸಿದ್ದು ಬೆನ್ನೂರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ  ಮುಂತಾದವರು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.